LatestNational

ರಜೆ ಮೇಲೆ ಮನೆಗೆ ಬಂದಿದ್ದ ಬಿಎಸ್‍ಎಫ್ ಯೋಧನನ್ನು ಗುಂಡಿಟ್ಟು ಕೊಂದ ಉಗ್ರರು

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪದಾಕರ ಅಟ್ಟಹಾಸ ಮುಂದುವರೆದಿದ್ದು, ಗುರುವಾರ ಬಿಎಸ್‍ಎಫ್ ಯೋಧನ ಮನೆಯಲ್ಲಿ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಭಯೋತ್ಪದಾಕರ ದಾಳಿಗೆ ಯೋಧ ಮೊಹ್ಮದ್ ರಮ್ಜಾನ್ ಪ್ರಯರ್ ಸ್ಥಳದಲ್ಲಿ ಮೃತಪಟಿದ್ದು, ಕುಟುಂಬದ ನಾಲ್ವರು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ.

bsf jawan rameez ahmad parray 2

ಪ್ರರಯ್ ಜಮ್ಮು ಕಾಶ್ಮೀರ ಗಡಿನಿಯಂತ್ರಣ ಪಡೆಯ 73ನೇ ಬೇಟಾಲಿಯಾನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೆಲವು ದಿನಗಳ ಹಿಂದಷ್ಟೇ ರಜೆ ಪಡೆದು ಜಮ್ಮು ಕಾಶ್ಮೀರದ ಬಂಡೀಪುರ ಜಿಲ್ಲೆಯ ನಿವಾಸಿಕ್ಕೆ ಬಂದಿದ್ದರು. ಭಯೋತ್ಪದಾಕರು ರಮ್ಜಾನ್ ಅವರನ್ನು ಅಪಹರಣ ಮಾಡಲು ಯತ್ನಿಸಿದ್ದಾರೆ. ಆದರೆ ಇದಕ್ಕೆ ಪ್ರತಿರೋಧ ತೋರಿದ ವೇಳೆ ಪ್ರರಯ್‍ರನ್ನು ಮನೆ ಹೊರಗಡೆ ಎಳೆದು ತಂದು ಹತ್ಯೆ ಮಾಡಿದ್ದಾರೆ.

ahmad parray 3

ಘಟನೆಯ ಕುರಿತು ಟ್ವೀಟ್ ಮಾಡಿರುವ ಉತ್ತರ ಕಾಶ್ಮೀರ ಪೊಲೀಸ್ ಮುಖ್ಯಸ್ಥ ನಿತೀಶ್ ಕುಮಾರ್, ರಮ್ಜಾನ್ ಕುಟುಂಬದ ನಾಲ್ವರು ಸದಸ್ಯರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಯೋಧ ನಿರಾಯುಧರಾಗಿದ್ದ ಸಂದರ್ಭದಲ್ಲಿ ದಾಳಿ ನಡೆಸಿರುವುದು ಅತ್ಯಂತ ಅನಾಗರಿಕ ಮತ್ತು ಅಮಾನವೀಯವಾಗಿದ್ದು, ಭಯೋತ್ಪದಾಕರ ಕೃತ್ಯಕ್ಕೆ ತಕ್ಕ ಶಿಕ್ಷೆಯನ್ನು ನೀಡಲಾಗುವುದು ಎಂದು ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ ಎಸ್‍ಪಿ ವೈದ್ ಹೇಳಿದ್ದಾರೆ.

ಪಾಕಿಸ್ತಾನ ಭಯೋತ್ಪಾದರು ಕಳೆದ ಮೇ ತಿಂಗಳಿನಲ್ಲಿ ಲೆ. ಉಮ್ಮರ್ ಫಯಾಜ್(22)ರನ್ನು ಹತ್ಯೆ ಮಾಡಿರುವ ಕುರಿತು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಮಹಾ ಅಧಿವೇಶನದಲ್ಲಿ ಭಾರತ ಪ್ರಸ್ತಾಪ ಮಾಡಿ, ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಗೆ ಉದಾಹರಣೆ ನೀಡಿತ್ತು. ಇದೊಂದು ನೈಜ ಚಿತ್ರಣವಾಗಿದ್ದು, ಕಠಿಣ ವಾಸ್ತವಿಕತೆ ಹಾಗೂ ದುರಂತವನ್ನು ಸೂಚಿಸುತ್ತದೆ ಎಂದು ಭಾರತದ ಪ್ರತಿನಿಧಿ 22 ವರ್ಷದ ಸೇನಾ ಧಿಕಾರಿಯ ಫೋಟೋ ಹಿಡಿದು ಪಾಕಿಸ್ತಾನದ ದುಷ್ಕೃತ್ಯಗಳನ್ನು ವಿವರಿಸಿದ್ದರು.

https://twitter.com/nitishcop/status/913104415476682752

ಲೆ.ಉಮ್ಮರ್ ಫಯಾಜ್ ಕೂಡ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ನಿರಾಯುಧರಾಗಿದ್ದಾಗ ಕಿಡ್ನ್ಯಾಪ್ ಆಗಿದ್ದರು. ಸಂಬಂಧಿಗಳ ಮದುವೆಯ ಸಂಭ್ರಮದಲ್ಲಿದ್ದ ಉಮ್ಮರ್‍ರನ್ನು ದಕ್ಷಿಣ ಜಮ್ಮವಿನ ಜಿಲ್ಲೆಯಿಂದ ಅಪಹರಣ ಮಾಡಲಾಗಿತ್ತು. ಉಗ್ರರು ಅವರನ್ನು ಬಿಟ್ಟುಬಿಡುತ್ತಾರೆ ಎಂದುಕೊಂಡು ಕುಟುಂಬಸ್ಥರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ಮರುದಿನ ಗ್ರಾಮದ 30 ಕಿ.ಮೀ ದೂರದಲ್ಲಿ ಸೇನಾಧಿಕಾರಿಯ ಮೃತದೇಹ ಪತ್ತೆಯಾಗಿತ್ತು. ಅವರ ತಲೆ ಹಾಗೂ ಹುಟ್ಟೆಯ ಭಾಗದಲ್ಲಿ ಬುಲೆಟ್ ಪತ್ತೆಯಾಗಿತ್ತು.

ಜಮ್ಮು ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ. ಭಯೋತ್ಪಾದಕರ ಕೃತ್ಯ ಅತ್ಯಂತ ಅಸಹನೀಯವಾದುದು ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *