ಚಂಡೀಗಢ: ಪಾಕಿಸ್ತಾನದ ಐಎಸ್‍ಐ ಏಜೆಂಟ್ ನೊಂದಿಗೆ ಮಾಹಿತಿ ರವಾನಿಸದ್ದರ ಆರೋಪದ ಮೇರೆಗೆ ಬಾರ್ಡರ್ ಸೆಕ್ಯೂರಿಟ್ ಫೋರ್ಸ್ (ಬಿಎಸ್‍ಫ್) ಯೋಧನನ್ನು ಗುಪ್ತದಳ ಅಧಿಕಾರಿಗಳು ಪಂಜಾಬಿನ ಫೆರೋಜ್‍ಪುರ್ ನಲ್ಲಿ ಬಂಧಿಸಿದ್ದಾರೆ.
ಶೇಖ್ ರೈಯಾಜುದ್ದೀನ್ ಬಂಧಿತ ಬಿಎಸ್‍ಎಫ್ ಯೋಧ. ಕಳೆದ ಕೆಲವು ತಿಂಗಳುಗಳಿಂದ ಭದ್ರತಾ ವ್ಯವಸ್ಥೆಗೆ ಸಂಬಂಧಪಟ್ಟ ಮಾಹಿತಿ ಹಾಗೂ ಛಾಯಚಿತ್ರಗಳನ್ನು ಪಾಕಿಸ್ತಾನಿ ಮೂಲದ ಐಎಸ್‍ಐ ಏಜೆಂಟ್‍ಗೆ ರವಾನಿಸಿದ್ದಾರೆ. ಶೇಖ್ ಮೂಲತಃ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ರೆನ್‍ಪುರ್ ಗ್ರಾಮದವರಾಗಿದ್ದು, ಬಿಎಸ್‍ಎಫ್‍ನ 29ನೇ ಬೆಟಾಲಿಯನ್‍ನಲ್ಲಿ ಪಂಜಾಬ್‍ನ ಫೆರೋಜ್‍ಪುರ್ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಗುಪ್ತದಳ ಅಧಿಕಾರಿಗಳು ಹೇಳಿದ್ದಾರೆ.
Advertisement
Advertisement
ಮಾಹಿತಿಗಳ ಪ್ರಕಾರ ಯೋಧ ಭಾರತದ ಗಡಿಪ್ರದೇಶಗಳ ಛಾಯಚಿತ್ರ ಹಾಗೂ ಬಿಎಸ್‍ಎಫ್ ನ ಮುಖ್ಯ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಪಾಕಿಸ್ತಾನದ ಗುಪ್ತದಳ ಅಧಿಕಾರಿ ಮಿರ್ಜಾ ಫೈಸಲ್ ನೊಂದಿಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಬಂಧಿತ ಯೋಧನಿಂದ ಎರಡು ಮೊಬೈಲ್, 7 ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ.
Advertisement
ಬಂಧಿತ ಆರೋಪಿಯ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ 29ನೇ ಹೆಚ್ಚುವರಿ ಕಮಾಡೇಂಟ್ ಮ್ಯಾಮ್ದತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೈನಿಕನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ತನಿಖಾಧಿಕಾರಿ ರಂಜಿತ್ ಸಿಂಗ್ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv