ಚಂಡೀಗಢ: ಅಮೃತಸರ ಸೆಕ್ಟರ್‌ನ ಅಜ್ನಾಲಾ ಉಪವಿಭಾಗದ ಅಡಿಯಲ್ಲಿ ಬರುವ ಧನೋ ಕಲಾನ್ ಗ್ರಾಮದ ಬಳಿಯ ಪ್ರದೇಶದಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಶುಕ್ರವಾರ ಚೀನಾ ನಿರ್ಮಿತ ಡ್ರೋನ್ ಅನ್ನು ಹೊಡೆದುರುಳಿಸಿದೆ.
ಬಿಎಸ್‍ಎಫ್ ಪತ್ರಿಕಾ ಪ್ರಕಟಣೆಯ ಪ್ರಕಾರ, ಕರ್ತವ್ಯದಲ್ಲಿದ್ದ ಸಿಬ್ಬಂದಿ ಶುಕ್ರವಾರ ಮುಂಜಾನೆ 1.15 ರ ಸುಮಾರಿಗೆ ಪಾಕಿಸ್ತಾನದ ಕಡೆಯಿಂದ ಭಾರತದ ಭೂಪ್ರದೇಶವನ್ನು ಪ್ರವೇಶಿಸುವ ಶಂಕಿತ ಡ್ರೋನ್‍ನ ಶಬ್ದವನ್ನು ಕೇಳಿ ಯೋಧರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಇದನ್ನೂ ಓದಿ: ಹಿಂದಿ ಬದಲು ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ: ಕಂಗನಾ ರಣಾವತ್
Advertisement
Advertisement
ಈ ವೇಳೆ ‘ಡಿಜೆಐ ಮ್ಯಾಟ್ರಿಸ್-300’ ಮಾದರಿಯ ‘ಮೇಡ್ ಇನ್ ಚೀನಾ’ ಡ್ರೋನ್ ಅನ್ನು ಅಂತಿಮವಾಗಿ 6:15 ರ ಸುಮಾರಿಗೆ ಬಿಎಸ್‍ಎಫ್ ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಭೇಟಿಯಾದ ಶರದ್ ಪವಾರ್
Advertisement
ಈ ಹಿಂದೆ 2021ರ ಡಿಸೆಂಬರ್ 18ರಂದು ಪಂಜಾಬ್‍ನ ಫಿರೋಜ್‍ಪುರ್ ವಲಯದ ವಾನ್ ಗಡಿಯಲ್ಲಿ ರಾತ್ರಿ 11:10ರ ವೇಳೆಗೆ ಕಪ್ಪು ಬಣ್ಣದ ಡ್ರೋನ್ ಹಾರಾಟ ನಡೆದಿತ್ತು. ಗಡಿ ಭಾಗದ 150 ಮೀಟರ್ ದೂರದಲ್ಲಿ ಇದರ ಚಲನ ವಲನವನ್ನು ಗುರುತಿಸಿದ ಸಿಬ್ಬಂದಿ ಅದನ್ನು ಹೊಡೆದುರುಳಿಸಿದ್ದರು. ಈ ವರ್ಷ ಪಂಜಾಬ್‍ನ ಗುರುದಾಸ್‍ಪುರ ಹಂತದ ಪಂಜ್‍ಗ್ರೇನ್ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಲಾಗಿತ್ತು. ಈ ಡ್ರೋನ್ ಮೂಲಕ ಮಾದಕ ದ್ರವ್ಯ ಹಾಗೂ ಕಳ್ಳ ಶಸ್ತ್ರಾಸ್ತ್ರ ಸಾಗಾಣೆ ನಡೆದಿತ್ತು. ಬಳಿಕ ಮಾರ್ಚ್ 8ರಂದು ಪಂಜಾಬ್‍ನ ಫಿರೋಜ್‍ಪುರ್ ವಲಯದಲ್ಲಿ ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ ಅನ್ನು ಬಿಎಸ್‍ಎಫ್ ಹೊಡೆದುರುಳಿಸಿತ್ತು.