ಮುಂಬೈ: ವಿಶ್ವದ ಹಲವು ರಾಷ್ಟ್ರಗಳು ಆರ್ಥಿಕ ಹಿಂಜರಿತದ (Economic Recession) ಭೀತಿ ಎದುರಿಸುತ್ತಿದ್ದರೆ ಭಾರತದ ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಬರೆದಿದೆ.
ಶುಕ್ರವಾರ ಒಂದೇ ದಿನ ಸೆನ್ಸೆಕ್ಸ್ 803.14 ಅಂಕ ಏರಿಕೆಯಾಗಿದೆ. ಗುರುವಾರ 63,915 ರಲ್ಲಿ ಕೊನೆಯಾಗಿದ್ದರೆ ಇಂದು 64,718.56 ರಲ್ಲಿ ವಹಿವಾಟು ಕೊನೆಗೊಳಿಸಿತು. ಒಂದು ಹಂತದಲ್ಲಿ 64,768 ಅಂಕಕ್ಕೆ ಹೋಗಿತ್ತು. ಜೂನ್ 28 ರಂದು ಸೆನ್ಸೆಕ್ಸ್ ಮೊದಲ ಬಾರಿಗೆ 64 ಸಾವಿರದ ಗಡಿಯನ್ನು ದಾಟಿತ್ತು.
Advertisement
Advertisement
ಇಂದಿನ ಏರಿಕೆ ನಂತರ ಬಾಂಬೆ ಷೇರು ಮಾರುಕಟ್ಟೆಯ ಮೌಲ್ಯ 295.72 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಈ ಮೊದಲು ಜೂನ್ 21 ರಂದು ಮಾರುಕಟ್ಟೆಯ ಮೌಲ್ಯ 2,94,36,594.50 ಕೋಟಿ ರೂ. ತಲುಪಿತ್ತು ಇದನ್ನೂ ಓದಿ: ಬ್ಯಾಂಕ್‍ಗಳ ವಿಲೀನ – ವಿಶ್ವದ ಮೌಲ್ಯಯುತ ಬ್ಯಾಂಕ್ ಆಗಿ ಹೊರಹೊಮ್ಮಿದ HDFC
Advertisement
ರಾಷ್ಟ್ರೀಯ ಷೇರು ಮಾರುಕಟ್ಟೆ(NSE) ಸೂಚಂಕ್ಯ ನಿಫ್ಟಿ 216.95 ಅಂಕ ಏರಿಕೆ ಕಂಡಿದೆ. ಗುರುವಾರ 18,972 ರಲ್ಲಿ ಕೊನೆಗೊಂಡಿದ್ದರೆ ಇಂದು 19,189.05 ರಲ್ಲಿ ವಹಿವಾಟು ಮುಗಿಸಿದೆ. ಒಂದು ಹಂತದಲ್ಲಿ ಇದು 19,201.70 ಅಂಕಕ್ಕೆ ಏರಿಕೆಯಾಗಿತ್ತು.
Advertisement
ಏರಿಕೆಯಾಗಿದ್ದು ಯಾಕೆ?
ಹೆಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ, ಮಾಹಿತಿ ತಂತ್ರಜ್ಞಾನ, ಅಟೋಮೊಬೈಲ್ ಮತ್ತು ಉಳಿದ ಬ್ಯಾಂಕ್ ಕಂಪನಿಗಳ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಹೆಚ್ಚು ಉತ್ಸಾಹ ತೋರಿದ್ದರಿಂದ ಸೆನ್ಸೆಕ್ಸ್, ನಿಫ್ಟಿ ಏರಿಕೆಯಾಗಿದೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಅತೀಕ್ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚಿದ ಯೋಗಿ ಆದಿತ್ಯನಾಥ್
ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಮಹೀಂದ್ರಾ ಮತ್ತು ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ, ಮಾರುತಿ, ವಿಪ್ರೋ, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಲಾಭ ಗಳಿಸಿವೆ.
ಭಾರತದ ಜಿಡಿಪಿ ಬೆಳವಣಿಗೆ ಆಗುತ್ತಿದೆ. ವಿಶೇಷವಾಗಿ ಉತ್ಪದನಾ ಕಂಪನಿಗಳು ಚೀನಾದ ಬದಲಾಗಿ ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿವೆ. ಈ ಕಾರಣಕ್ಕೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಹೆಚ್ಚಿನ ಪ್ರಮಾಣದಲ್ಲಿ ಭಾರತದ ಕಂಪನಿಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ.
Web Stories