ಚಿಕ್ಕಮಗಳೂರು: ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಯವರಿಂದ ಬಿಎಸ್ ಯಡಿಯೂರಪ್ಪ ಆಶೀರ್ವಾದ ಪಡೆದಿದ್ದಾರೆ.
ಶೃಂಗೇರಿಯ ಗುರುನಿವಾಸದಲ್ಲಿ ಭಾರತೀ ತೀರ್ಥ ಸ್ವಾಮೀಜಿಯವರಿಂದ ಬಿಎಸ್‍ವೈ ಆಶೀರ್ವಾದ ಪಡೆದರು. ನಿಮ್ಮ ಆಶಯ ನೆರವೇರಲಿ ಎಂದು ಭಾರತೀ ತೀರ್ಥ ಸ್ವಾಮೀಜಿ ಹಾರೈಸಿದ್ರು. ಈ ವೇಳೆ ಬಿಎಸ್‍ವೈ ಗೆ ಶಾಸಕ ಡಿ.ಎನ್. ಜೀವರಾಜ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸಾಥ್ ನೀಡಿದ್ರು.
- Advertisement 2-
- Advertisement 3-
ಮಹದಾಯಿ ಸಮಸ್ಯೆ ಬಗೆಹರಿಯೋದಕ್ಕೆ ಕಲ್ಲು ಹಾಕಿರೋದು ಈ ರಾಜ್ಯದ ಮುಖ್ಯಮಂತ್ರಿ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಎಂದು ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ವೇಳೆ ಮಾತನಾಡಿದ ಅವರು, ಸೋನಿಯಾಗಾಂಧಿ ಗೋವಾದಲ್ಲೇ ಇದ್ದಾರೆ. ಗೋವಾ ಕಾಂಗ್ರೆಸ್ ನಾಯಕರ ಮನವೊಲಿಸಬಹದು. ಆದ್ರೆ ಅವರು ಆ ಕೆಲಸ ಮಾಡ್ತಿಲ್ಲ. ನೀರು ಬಿಡದಿರೋದಕ್ಕೆ ಹಾಗೂ ಎಲ್ಲಾ ಗೊಂದಲಗಳಿಗೆ ಕಾಂಗ್ರೆಸ್ ನಾಯಕತ್ವ ಹಾಗೂ ಸಿಎಂ ಸಿದ್ದರಾಮಯ್ಯನವರೇ ಕಾರಣ ಎಂದ್ರು. ಇದೊಂದು ಭ್ರಷ್ಟಾಚಾರದ ಸರ್ಕಾರ, ಈ ಸರ್ಕಾರ ದಿವಾಳಿಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.
- Advertisement 4-
143 ತಾಲೂಕು ಮುಗಿಸಿಕೊಂಡು 144ನೇ ಕ್ಷೇತ್ರಕ್ಕೆ ಬಂದಿದ್ದೇನೆ. ಎಲ್ಲ ಕಡೆಯೂ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ನಮ್ಮ ಟಾರ್ಗೆಟ್ ಇರೋದು 150 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬುದು. ನಮ್ಮ ಐದು ವರ್ಷದ ಕಾರ್ಯಕ್ರಮ ಹಾಗೂ ಪ್ರಧಾನಿ ಮೋದಿಯವರ ಮೂರುವರೆ ವರ್ಷದ ಆಡಳಿತದ ಆಧಾರದ ಮೇಲೆ ನಾವು 150 ಸ್ಥಾನ ಗೆಲ್ಲಲ್ಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಶೃಂಗೇರಿ ಶಾರದಾಂಬೆಯ ದರ್ಶನ ಮಾಡಿ, ಶ್ರೀಗಳ ಆಶೀರ್ವಾದ ಪಡೆದಿದ್ದೇವೆ, ನಾವು 150 ಸ್ಥಾನ ಗೆಲ್ಲೋದು ಖಚಿತ ಅಂತ ಹೇಳಿದ್ರು.