ಬೆಂಗಳೂರು: ಮಹದಾಯಿ ವಿವಾದ ಇದೀಗ ಮತ್ತೊಂದು ಸ್ಫೋಟಕ ತಿರುವು ಪಡೆದುಕೊಂಡಿದ್ದು, ಗೋವಾ ಬಿಜೆಪಿ ಇಬ್ಬಗೆ ನೀತಿ ವಿರುದ್ಧ ಕರ್ನಾಟಕ ಬಿಜೆಪಿಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಮಹದಾಯಿ ಕುರಿತು ಮಾತುಕತೆಗೆ ಒಪ್ಪಿ ಬರೆದಿರುವ ಪತ್ರದ ಬಗ್ಗೆ ಗೋವಾ ಬಿಜೆಪಿ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಇತ್ತ ಮಹದಾಯಿ ಭಾಗದ ರೈತರು ತಮ್ಮ ಹೋರಾಟ ತೀವ್ರಗೊಳಿಸಿದ್ದಾರೆ. ಗೋವಾ ಬಿಜೆಪಿಯ ಇಬ್ಬಗೆ ನೀತಿಯಿಂದ ಕರ್ನಾಟಕದಲ್ಲಿ ನಮ್ಮ ಇಮೇಜ್‍ಗೆ ಧಕ್ಕೆ ಆಗಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ.
ಒಟ್ಟಿನಲ್ಲಿ ಮಹದಾಯಿ ವಿವಾದದ ಕುರಿತು ಮಾತುಕತೆ ಸಂಬಂಧ ಗೋವಾ ಸಿಎಂ ಮನೋಹರ್ ಪರಿಕ್ಕರ್‍ಗೆ ಸ್ಪಷ್ಟ ನಿರ್ದೇಶನ ನೀಡಿ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಒತ್ತಾಯಿಸಿದ್ದಾರೆ. ಆದರೆ ಅಮಿತ್ ಶಾ ಅವರು ಗೋವಾ-ಕರ್ನಾಟಕ ಬಿಜೆಪಿ ನಡುವೆ ಸಂಧಾನದ ಭರವಸೆ ನೀಡಿಲ್ಲ ಎಂದು ವರದಿಯಾಗಿದೆ.