ಬೆಂಗಳೂರು: ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆಗೆ ನಿಜವಾದ ಕಾರಣ ಏನು ಎನ್ನುವದು ತಿಳಿದು ಬಂದಿಲ್ಲ.
ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಅಪಾರ್ಟ್ಮೆಂರ್ಟ್‌ಮೆಂಟ್‌ನಲ್ಲಿ ಸೌಂದರ್ಯ ಬೆಳಗ್ಗೆ 10 ಗಂಟೆಯ ವೇಳೆ ನೇಣಿಗೆ ಶರಣಾಗಿದ್ದು, ಪೊಲೀಸರಿಗೆ 11 ಗಂಟೆಗೆ ಗೊತ್ತಾಗಿದೆ. ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ
Advertisement
Advertisement
ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದಾಗ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸೌಂದರ್ಯ ಪತ್ತೆಯಾಗಿದ್ದಾರೆ. ಕೂಡಲೇ ಮಹಿಳಾ ಸಿಬ್ಬಂದಿ ದೇಹವನ್ನು ಇಳಿಸಿದಾಗ ಮೃತಪಟ್ಟಿರುವುದು ಖಚಿತವಾಗಿದೆ.
Advertisement
ಕೊಠಡಿಯಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಹೀಗಾಗಿ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ. ಇದನ್ನೂ ಓದಿ: ಸೌಂದರ್ಯ ಸಾವು ನಿಜಕ್ಕೂ ಶಾಕ್ ನೀಡಿದೆ: ಸಹ ವೈದ್ಯರು
Advertisement
ಸೌಂದರ್ಯ ದಂಪತಿ ಯಶವಂತಪುರ ಬಳಿಯ ಫ್ಲಾಟ್‌ನಲ್ಲಿ ವಾಸವಾಗಿದ್ದಾರೆ. ಆದರೆ ಇಂದು ಸೌಂದರ್ಯ ಡಾಲರ್ಸ್ ಕಾಲೋನಿಯ ಲೆಗೆಸ್ಸಿ ಅಪಾರ್ಟ್ ಮೆಂಟ್ ಫ್ಲಾಟ್ ನಲ್ಲಿ ನೇಣಿಗೆ ಶರಣಾಗಿದ್ದಾರೆ.
ಗಂಡ ನಿರಜ್ ಕೊಟ್ಟ ದೂರಿನ ಆಧಾರದ ಮೇಲೆ ಯುಡಿಆರ್ ಕೇಸ್ ದಾಖಲಿಸಿಕೊಳ್ಳಲಾಗಿದೆ. ಗಂಡ ಡಾ.ನಿರಜ್ ಬೆಳಗ್ಗೆ ಡ್ಯೂಟಿಗೆ ಹೋಗಿದ್ದರು. ಈ ವೇಳೆ ಹತ್ತು ಗಂಟೆಗೆ ಮನೆ ಕೆಲಸದವರು ಕರೆ ಮಾಡಿ, ಮೇಡಂ ರೂಂ ಓಪನ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅರ್ಧಗಂಟೆಯಲ್ಲಿ ನಿರಜ್ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ಬಾಗಿಲು ಒಡೆದು ಒಳಗಡೆ ಹೋಗಿ ನೋಡಿದಾಗ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿರುವ ವಿಚಾರ ಗೊತ್ತಾಗಿದೆ.