DistrictsKarnatakaLatestMain PostRaichur

ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿದ್ದೇನೆ: ಬಿಎಸ್‍ವೈ

-ಕುಟುಂಬ ಸಮೇತರಾಗಿ ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಬಿಎಸ್‌ವೈ

ರಾಯಚೂರು: ಗುರುರಾಘವೇಂದ್ರ ಸ್ವಾಮಿಗಳ 451ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆದರು. ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಹಾಗು ತಮ್ಮ ಸೊಸೆಯಂದಿರ ಜೊತೆ ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ರಾಯರ ದರ್ಶನ ಬಳಿಕ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಶಿರ್ವಾದ ಪಡೆದರು. ಈ ವೇಳೆ ಬಿಎಸ್‍ವೈ ಜೊತೆ ಶ್ರೀಗಳು ಮಾತುಕತೆ ನಡೆಸಿದರು. 2009ರಲ್ಲಿ ಭೀಕರ ಪ್ರವಾಹ ಬಂದಾಗ ನೀವು ಸಿಎಂ ಆಗಿದ್ದು ಸಾಕಷ್ಟು ಪರಿಹಾರ ನೀಡಿದಿರಿ, ಆಗ ಮಂತ್ರಾಲಯಕ್ಕೂ ಪ್ರವಾಹ ಎದುರಾಗಿತ್ತು. ಕರ್ನಾಟಕ ಹಾಗೂ ಮಂತ್ರಾಲಯ ಸಂಪರ್ಕ ಸೇತುವೆ ನಿರ್ಮಿಸಿದ್ದಿರಿ ಎಂದು ಶ್ರೀಗಳು ಬಿಎಸ್‍ವೈ ಗುಣಗಾನ ಮಾಡಿದರು. ಬಿಎಸ್‍ವೈ, ಸಂಸದ ರಾಘವೇಂದ್ರ ಹಾಗೂ ವಿಜಯೇಂದ್ರಗೆ ಶಾಲು ಹೊದಿಸಿ ಮಂತ್ರಾಕ್ಷತೆ ನೀಡಿ ಶ್ರೀಗಳು ಆಶಿರ್ವದಿಸಿದರು.

ಈ ವೇಳೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು, ನಾಳೆಯಿಂದ ರಾಜ್ಯ ನಾಯಕರ ಜೊತೆ ಚರ್ಚಿಸಿ ರಾಜ್ಯಾದ್ಯಂತ ಓಡಾಟ ಮಾಡಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ಆಗಸ್ಟ್ 21ರಿಂದ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ:ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ – ಪ್ರಮುಖ ಮೂವರು ಆರೋಪಿಗಳ ಬಂಧನ

ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಬಗ್ಗೆ ರಾಯರ ಬಳಿ ಬೇಡಿಕೊಂಡಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇನೆ. ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರಿದ್ದಾರೆ. ಪಕ್ಷ ಕಟ್ಟುವಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಮುಂದೆ ಯಾವ ಸ್ಥಾನಮಾನ ನೀಡಬೇಕು ಅನ್ನೋದನ್ನ ಕೇಂದ್ರ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.

ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಸಿಎಂ ಬೊಮ್ಮಾಯಿ ಪೂರ್ಣಾವಧಿ ಇರುತ್ತಾರೆ. ಸಿಎಂ ಬದಲಾವಣೆಗಳು ಕೇವಲ ಊಹಾಪೋಹವಷ್ಟೇ. ರಾಜ್ಯದಲ್ಲಿ ಸಾಕಷ್ಟು ಮಳೆಯಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ರೈತರು ಇದರಿಂದ ಕಂಗಾಲಾಗುವುದು ಬೇಡ. ರೈತರಿಗೆ ಸರ್ಕಾರ ಸೂಕ್ತವಾದ ಪರಿಹಾರ ನೀಡುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸೇನಾ ಶಿಬಿರದೊಳಗೆ ನುಗ್ಗಲು ಯತ್ನಿಸಿದ್ದ ಇಬ್ಬರು ಉಗ್ರರ ಹತ್ಯೆ- ಮೂವರು ಯೋಧರು ಹುತಾತ್ಮ

Live Tv

Leave a Reply

Your email address will not be published.

Back to top button