ಬೆಂಗಳೂರು: ಅಲ್ಪಸಂಖ್ಯಾತರನ್ನ ತೃಪ್ತಿಪಡಿಸಲು ಮುಖ್ಯಮಂತ್ರಿಗಳು ತೆಗೆದುಕೊಂಡಿರೋ ನಿರ್ಧಾರವನ್ನ ಖಂಡಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಅವರು ಸಿದ್ದರಾಮಯ್ಯ (Siddaramaiah) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ʻಪಬ್ಲಿಕ್ ಟಿವಿʼಯೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನ ತೃಪ್ತಿಪಡಿಸಲು ಮುಖ್ಯಮಂತ್ರಿಗಳು ತೆಗೆದುಕೊಂಡಿರೋ ಈ ನಿರ್ಧಾರವನ್ನ ಖಂಡಿಸುತ್ತೇನೆ. ಇದು ಶೋಭೆ ತರುವಂತಹದ್ದಲ್ಲ, ಅಧಿಕಾರ ಇದೆ ಅಂತ ರಾಜಕೀಯ ದೊಂಬರಾಟ ಮಾಡಲು ಹೊರಟಿದ್ದಾರೆ. ನೋಡೋಣ ಎಲ್ಲಿಯವರೆಗೆ ಇದೇ ರೀತಿ ಮಾಡ್ತಾರೆ ಅಂತ. ಬಿಜೆಪಿಯಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ವಿಚಾರ ಇಲ್ಲ, ಜನರೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ.
Advertisement
Advertisement
ಶಾಲೆಗಳಲ್ಲಿ ಹಿಜಬ್ (Hijab) ನಿಷೇಧ ವಾಪಸ್ ಪಡೆಯಬೇಕೆಂಬ ಸಿದ್ದರಾಮಯ್ಯ ಅವರ ತೀರ್ಮಾನವನ್ನು ಖಂಡಿಸ್ತೇನೆ. ಶಾಲಾ ಮಕ್ಕಳಿಗೆ ಸಮವಸ್ತ್ರ ನೀತಿ ಅಗತ್ಯ. ಇದನ್ನು ಧಿಕ್ಕರಿಸಿ ಸಿದ್ದರಾಮಯ್ಯ ಈ ತೀರ್ಮಾನ ಕೈಗೊಂಡಿದ್ದಾರೆ. ಈಗಲೇ ಎಚ್ಚೆತ್ತು ತೀರ್ಮಾನ ವಾಪಸ್ ಪಡೆಯಬೇಕು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಯಾರೋ ಸಭೆಯಲ್ಲಿ ಕೇಳಿದ್ರಂತೆ ಇವರು ಹೇಳಿಬಿಟ್ರಂತೆ- ಹಿಜಬ್ ನಿಷೇಧ ವಾಪಸ್ಸಿಗೆ ವಿಜಯೇಂದ್ರ ಕಿಡಿ
Advertisement
ಕಾಂಗ್ರೆಸ್ ಸರ್ಕಾರ (Congress Government) ಭಂಡ ಸರ್ಕಾರ, ಹಿಜಬ್ ವಾಪಸ್ ಪಡೆಯಿರಿ ಅಂತ ಯಾವ ಮುಸ್ಲಿಂ ನಾಯಕರು ಹೇಳಿದ್ರು ಇವರಿಗೆ? ಅವರ ಉಚಿತ ಗ್ಯಾರಂಟಿಗಳನ್ನು ಜಾರಿ ಮಾಡಲಾಗದೇ ಈರೀತಿ ಜನರನ್ನ ದಿಕ್ಕು ತಪ್ಪಿಸುತ್ತಿದ್ದಾರೆ. ಬರಗಾಲವನ್ನು ಮರೆತೇ ಬಿಟ್ಟಿದೆ ಸರ್ಕಾರ. ಕೂಡಲೇ ಹಿಜಬ್ ನಿಷೇಧ ವಾಪಸ್ ನಿರ್ಣಯ ಹಿಂದಕ್ಕೆ ಪಡಯಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಹಿಜಬ್ ನಿಷೇಧಿಸಿರಲಿಲ್ಲ – ಸಿ.ಟಿ ರವಿ
Advertisement
ಸಿಎಂ ಹೇಳಿದ್ದೇನು?
ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಹಿಜಬ್ ನಿಷೇಧ ವಾಪಸ್ ಪಡೆಯಲಾಗುವುದು. ಬಿಜೆಪಿ ಸರ್ಕಾರ ಹಿಜಬ್ ನಿಷೇಧಿಸಿತ್ತು. ಅದನ್ನು ವಾಪಸ್ ಪಡೆಯಲಾಗುವುದು. ಹಿಜಬ್ ನಿಷೇಧ ವಾಪಸ್‌ಗೆ ತಿಳಿಸಿದ್ದೇನೆ. ಉಡುಪು ಅವರವರ ಇಷ್ಟ. ಹಿಜಬ್ ನಿಷೇಧ ವಾಪಸ್‌ಗೆ ಹೇಳಿದ್ದೀನಿ. ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಬೋಗಸ್. ಬಟ್ಟೆ, ಉಡುಪು, ಜಾತಿ ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಾವು ಅಂತಹ ಕೆಲಸ ಮಾಡುವುದಿಲ್ಲ. ಹಿಜಬ್ ನಿಷೇಧದ ಆದೇಶ ವಾಪಸ್ ಪಡೆಯುತ್ತೇವೆ. ಹಿಜಬ್ ಧರಿಸಿ ಶಾಲಾ-ಕಾಲೇಜುಗಳಿಗೆ, ಪರೀಕ್ಷೆ ಬರೆಯಲು ಹೋಗಬಹುದು ಎಂದು ಹೇಳಿದ್ದರು.