ಕಲಬುರಗಿ: ಕಾಂಗ್ರೆಸ್ (Congress) ಪಕ್ಷದಲ್ಲಿ ನರೇಂದ್ರ ಮೋದಿಗೆ (Narendra Modi) ಸರಿಸಮನಾದ ಯಾವೊಬ್ಬ ನಾಯಕನು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಹೇಳಿದರು.
ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ (Siddaramaiah) ಅವರು ಮನಬಂದಂತೆ ಮಾತನಾಡುತ್ತಿದ್ದು, ಕೂಡಲೇ ಆ ರೀತಿಯ ಮಾತುಗಳನ್ನು ಆಡುವುದು ನಿಲ್ಲಿಸಬೇಕು. ಬಿಜೆಪಿ ನನಗೆ ಸಾಕಷ್ಟು ಅಧಿಕಾರ, ಸ್ಥಾನ-ಮಾನ, ಗೌರವವನ್ನು ನೀಡಿದ್ದು, ಈ ಪರಿಯಾದ ಗೌರವ ಬೇರಾರಿಗೂ ನೀಡಿಲ್ಲ. ನಾನೇ ಸ್ವತಃ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ವಿಚಾರವಾಗಿ ಮಾತನಾಡಿದ ಅವರು, ಭ್ರಷ್ಟಾಚಾರ ಯಾರೇ ಮಾಡಿದರೂ, ಅದು ಅಕ್ಷಮ್ಯ ಅಪರಾಧವಾಗಿದ್ದು, ಈ ಘಟನೆಗೆ ನಮ್ಮದು ಯಾರ ಬೆಂಬಲವು ಇಲ್ಲ. ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಪ್ರಕರಣವು ತನಿಖೆ ಹಂತದಲ್ಲಿ ಇದೆ. ಇಂದು ಅಥವಾ ನಾಳೆ ಅವರ ಬಂಧನವಾಗಲಿದ್ದು, ಭ್ರಷ್ಟಾಚಾರ ಮಾಡಿದವರನ್ನು ರಕ್ಷಿಸುವ ಮಾತೇ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ದಿಂಬು, ಹಾಸಿಗೆ, ಬಿಸ್ಕೆಟ್, ಕಾಫಿಯಲ್ಲೂ ಭ್ರಷ್ಟಾಚಾರ ಮಾಡಿದೆ: ಬೊಮ್ಮಾಯಿ
Advertisement
Advertisement
ಸಂಸದೆ ಸುಮಲತಾ ಬಿಜೆಪಿ (BJP) ಸೇರುವ ಬಗ್ಗೆ ಅವರು ಸ್ಪಷ್ಟ ನಿಲುವು ಹೇಳಿಲ್ಲ. ಹಾಗೂ ಸಚಿವ ಸೋಮಣ್ಣ ಪಕ್ಷ ಬಿಡುವ ಪ್ರಶ್ನೆ ಉದ್ಭವವಾಗುವುದಿಲ್ಲ ಎಂದ ಅವರು, ನಾರಾಯಣ ಗೌಡರನ್ನು ಕಷ್ಟಪಟ್ಟು ಗೆಲ್ಲಿಸಿದ್ದೇವೆ. ಗೆಲ್ಲಿಸುವುದಕ್ಕೆ ಆಗದೆ ಇರುವ ಕಡೆಯಲ್ಲಿ ಗೆಲ್ಲಿಸಿದ್ದೇವೆ. ಈಗ ಯಾರೆಲ್ಲ ಏನೂ ಮಾಡುತ್ತಾರೆ ನೋಡೋಣ ಎಂದು ಹೇಳಿದರು. ಇದನ್ನೂ ಓದಿ: BSY ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಭದ್ರತಾ ಲೋಪ