ಬಾಗಲಕೋಟೆ: ನಾನು ವಿಮಾನದಲ್ಲಿ ಹೊರಡುವವನಾಗಿದ್ದೆ, ಸಿದ್ದರಾಮಯ್ಯನವರು ಹೊರಟಿದ್ದರು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಇಬ್ಬರು ಸೇರಿ ಕೂತಿದ್ದೆವು. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಬಾಗಲಕೋಟೆಯಲ್ಲಿ ಪದವೀಧರರ ಮತ್ತು ಶಿಕ್ಷಕರ ಮತಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಆಗಮಿಸಿದಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಕಸ್ಮಿಕವಾಗಿ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯರನ್ನು ಭೇಟಿ ಆದೆ. ಇಬ್ಬರು ವಿಮಾನ ನಿಲ್ದಾಣದಲ್ಲಿ ಒಂದು ಮೂರು ನಿಮಿಷ ಕೂತಿದ್ದೆವು. ಆಮೇಲೆ ಅವರು ಹೊರಟು ಹೋದರು. ನಾನು ನನ್ನ ಪಾಡಿಗೆ ಹೊರಟೆ. ಅವರ ಜೊತೆ ಚರ್ಚೆ ಮಾಡೋದೆನಿದೆ. ಯಾವುದೇ ವಿಶೇಷತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ದಾರಿ ಅವರಿಗೆ, ನಮ್ಮ ದಾರಿ ನಮಗೆ. ಅವರು ನಮ್ಮ ಕಟ್ಟಾವಿರೋಧಿಗಳು. ಈ ಹಿನ್ನೆಲೆಯಲ್ಲಿ ಅವರ ಜೊತೆ ಮಾತಾಡುವ ಪ್ರಶ್ನೆಯೇ ಉದ್ಭವ ಆಗುವುದಿಲ್ಲ. ಎಲ್ಲರ ಜೊತೆ ನಾನು ಸ್ನೇಹವನ್ನು ಚೆನ್ನಾಗಿ ಇಟ್ಟುಕೊಂಡಿದ್ದೇನೆ. ಅದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮಾಜಿ ಸಿಎಂ ಪುಂಡ, ಪೋಕರಿಯಂತೆ ಮಾತನಾಡುತ್ತಿದ್ದಾರೆ: ಸಿದ್ದು ವಿರುದ್ಧ ಶೆಟ್ಟರ್ ವಾಗ್ದಾಳಿ
ಆರ್‌ಎಸ್‍ಎಸ್ ಚಡ್ಡಿ ಹೇಳಿಕೆ ಶೋಭೆ ತರಲ್ಲ: ಆರ್‌ಎಸ್‍ಎಸ್ ಬಗ್ಗೆ ಕಾಂಗ್ರೆಸ್ ನಾಯಕರ ಟೀಕೆ ಹಾಗೂ ಚಡ್ಡಿ ಸುಡ್ತೇವೆ ಎಂಬ ಹೇಳಿಕೆ ನೀಡುವುದು ಅದು ಯಾರಿಗೂ ಶೋಭೆ ತರುವಂತಹದಲ್ಲ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಗೌರವಯುತವಾಗಿ ನಡೆದುಕೊಳ್ತಾರೆ ಎಂದು ನಾವು ನಿರೀಕ್ಷೆ ಮಾಡಿದ್ದೆವು. ಆದರೆ ಅವರು ಈ ರೀತಿ ಆರ್‌ಎಸ್‍ಎಸ್ ಹಾಗೂ ಚಡ್ಡಿ ಬಗ್ಗೆ ಮಾತಾಡಿಕೊಂಡಿದ್ರೆ ಅವರಿಗೆ ಇರುವ ಗೌರವ ಹಾಳಾಗುತ್ತದೆ. ಶೋಭೆ ಬರಲ್ಲ ಎಂದ ಕಿಡಿಕಾರಿದರು. ಇದನ್ನೂ ಓದಿ: ಗ್ಯಾಂಗ್ ರೇಪ್ ಸಂತ್ರಸ್ತೆಯ ಫೋಟೋ ರಿಲೀಸ್ – ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು