ಬೆಂಗಳೂರು: ಕಾವೇರಿ ನದಿ (Cauvery Water) ನೀರಿನ ವಿಷಯದಲ್ಲಿ ನಾವು ಮೇಲ್ಮನವಿ ಸಲ್ಲಿಸಬೇಕು. ಇಲ್ಲಿಗೆ ತಜ್ಞರ ತಂಡವನ್ನು ಕಳುಹಿಸಿಕೊಡಲಿ. ಜಲಾಶಯದ ನೀರಿನ ಮಟ್ಟವನ್ನು ನೋಡಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‍ಡಿಎಗೆ (NDA) ಜೆಡಿಎಸ್ (JDS) ಸೇರುವ ಕುಮಾರಸ್ವಾಮಿ ನಿರ್ಧಾರದಿಂದ ರಾಜ್ಯದಲ್ಲಿ ದೊಡ್ಡ ಶಕ್ತಿ ಬಂದಂತಾಗಿದೆ. ಎಲ್ಲಾ ಲೋಕಸಭಾ ಕ್ಷೇತ್ರ ಗೆಲ್ಲಲು ಇದು ಸಹಕಾರಿಯಾಗುತ್ತದೆ. ಬೆಂಗಳೂರಿಗೆ ಕುಡಿಯುವ ನೀರು ಕೊಡದೆ ಇರುವ ಪರಿಸ್ಥಿತಿ ಇದೆ. ನಾವು ನೀರು ಬಿಡುವ ಪರಿಸ್ಥಿತಿಯಲ್ಲಿ ಇಲ್ಲ. ಇದರ ಬಗ್ಗೆ ಸುಪ್ರೀಂಕೋರ್ಟ್ (Supreme Court) ಮನವರಿಕೆ ಮಾಡಿಕೊಡುವ ಎಲ್ಲ ಪ್ರಯತ್ನವನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಸರ್ಕಾರ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ನಮ್ಮ ಕುಮಾರಸ್ವಾಮಿಯವರು ಕಾವೇರಿ ಬಗ್ಗೆ ದೆಹಲಿಯಲ್ಲಿ ಚರ್ಚೆ ಮಾಡಿದ್ದಾರೆ. ಇದರ ಬಗ್ಗೆ ಎಲ್ಲರಿಗೂ ಮಾಹಿತಿ ಇದೆ, ಎಲ್ಲರು ಪರವಾಗಿ ಇದ್ದಾರೆ ವಿನಹ, ಯಾರು ಕೂಡ ಇದರ ವಿರೋಧ ಇಲ್ಲ. ಇದಕ್ಕೆ ಒಂದೇ ಮಾರ್ಗ ಮೇಲ್ಮನವಿ ಸಲ್ಲಿಸಬೇಕು. ತಜ್ಞರನ್ನು ಕಳುಹಿಸಿ ಇಲ್ಲಿನ ವಾಸ್ತವ ಸ್ಥಿತಿಯನ್ನು ಅವಲೋಕಿಸಬೇಕು ಎಂದರು. ಇದನ್ನೂ ಓದಿ: ಭುಗಿಲೆದ್ದ ಆಕ್ರೋಶದ ನಡುವೆಯೂ ತಮಿಳುನಾಡಿಗೆ ನೀರು; KRS ನೀರಿನ ಮಟ್ಟ 96 ಅಡಿಗೆ ಕುಸಿತ
ಮೇಲ್ಮನವಿ ಸಲ್ಲಿಸಿ, ತಜ್ಞರ ತಂಡ ಕಳುಹಿಸಿ ಕೊಡಲಿ ಜಲಾಶಯದ ಮಟ್ಟ ನೋಡಲಿ. ಕುಡಿಯುವ ನೀರಿಗೂ ಕಷ್ಟವಿರುವ ಪರಿಸ್ಥಿತಿಯಲ್ಲಿ ರಾಜ್ಯವಿದೆ ಎಂದು ತಿಳಿಸಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]