ಬೆಂಗಳೂರು: ಕಾಂಗ್ರೆಸ್-ಬಿಜೆಪಿ ಮಧ್ಯೆ ‘ಡ್ರಗ್ ಪೆಡ್ಲರ್’ ಫೈಟ್ ತೀವ್ರಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಹೇಳಿಕೆಯನ್ನು ಮಾಜಿ ಸಿಎಂ ಯಡಿಯೂರಪ್ಪ ಖಂಡಿಸಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ಗೌರವ ಇದೆ. ಅಗೌರವ ತರುವ ಹಾಗೆ ಮಾತಾಡಬಾರದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಮತ್ತು ವಕ್ತಾರ ಗಣೇಶ್ ಕಾರ್ಣಿಕ್ ಸುದ್ದಿಗೋಷ್ಠಿ ನಡೆಸಿ ಸಮರ್ಥಿಸಿಕೊಂಡಿದ್ದಾರೆ. ಇತ್ತ ಬಿಜೆಪಿ ವಿರುದ್ಧ ಕಾಂಗ್ರೆಸ್ಸಿಗರು ಮುಗಿಬಿದ್ದಿದ್ದಾರೆ. ಕಟೀಲ್ ಒಬ್ಬ ಮೆಂಟಲ್, ಹುಚ್ಚ ಅಂತ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ – ಎಚ್‌ಡಿಕೆಯ ದ್ವಿಪತ್ನಿತ್ನ ವಿಚಾರ ಪ್ರಸ್ತಾಪಿಸಿ ಕಾಲೆಳೆದ ಬಿಜೆಪಿ
Advertisement
Advertisement
ಬಳ್ಳಾರಿಯ ಶಾಸಕ ನಾಗೇಂದ್ರ ಅವರು, ಕಟೀಲ್ ನಾಲಾಯಕ್, ಅವನಿಗೆ ಬಾಯಿ ಚಪಲ. 3 ಬಾರಿ ಸಂಸದರಾದರೂ ಮಾತಾಡೋ ಮಾತುಗಳಾ ಅಂತ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಅವರಂತೂ ಕಟೀಲ್ ಒಬ್ಬ ಅಯೋಗ್ಯ. ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಬಿಜೆಪಿಗರು ಸಲಿಂಗಕಾಮಿಗಳು ಅಂತ ಆರೋಪಿಸಿದ್ದಾರೆ. ಇದನ್ನೂ ಓದಿ: ತಾಲಿಬಾನ್ ಸರ್ಕಾರದಲ್ಲಿ ಸೂಸೈಡ್ ಬಾಂಬರ್ ಕುಟುಂಬಕ್ಕೆ ನಗದು ಪರಿಹಾರ, ನಿವೇಶನ ಗಿಫ್ಟ್
Advertisement
ಎಲ್ಲದರ ಮಧ್ಯೆ ಬೆಂಗಳೂರಿನ ಬಿಜೆಪಿ ಕಚೇರಿಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಯತ್ನ ನಡೆಸಿದ್ರು. ಕಟೀಲ್‍ದು ನಾಯಿ ನಾಲಿಗೆ, ಕಟೀಲ್ ಹುಚ್ಚ ಎಂದು ಘೋಷಣೆ ಕೂಗಿದ್ರು. ಮೈಸೂರಿನಲ್ಲೂ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದ್ರು. ಇದನ್ನೂ ಓದಿ: ರಮೇಶ್ ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ