ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಕುರಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BasanaGouda Patil yatnal) ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (BS Yediyurappa) ತಿರುಗೇಟು ನೀಡಿದ್ದಾರೆ.
ಯತ್ನಾಳ್ ಹೇಳಿಕೆ ಕುರಿತು ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯಿಸಿದ ಬಿಎಸ್‍ವೈ, ಯತ್ನಾಳ್ ಮನೆಗೆ ಹೋಗ್ತೀವಿ ಅಂದೋರು ಯಾರು ಎಂದು ಪ್ರಶ್ನಿಸುವ ಮೂಲಕ ಸಿಟ್ಟಾಗಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ನನ್ನನ್ನು ಭೇಟಿಯಾಗೋ ನಾಟಕ ಮಾಡೋದು ಬೇಡ: ಯತ್ನಾಳ್
ಯತ್ನಾಳ್ ಹೇಳಿದ್ದೇನು..?: ವಿಜಯೇಂದ್ರ (BY Vijayendra) ಬಂದು ನನ್ನ ಭೇಟಿ ಆಗುವ ನಾಟಕ ಮಾಡುವುದು ಬೇಡ. ಎಲ್ಲ ಸರಿಯಾಗಿದೆ ಎಂದು ಹೇಳಿ ಹೋಗುವುದು ಬೇಡ. ವಿಜಯೇಂದ್ರ ಮೊದಲು ಏನೇನು ನನಗೆ ಅಡೆತಡೆ ಮಾಡಿದ್ದಾರೆ ಗೊತ್ತಿದೆ. ವಿಜಯಪುರ ಜಿಲ್ಲೆಗೆ ಬಂದ ಅನುದಾನವನ್ನು ವಾಪಸ್ ಪಡೆದರು. ಈಗ ಸರಿ ಮಾಡೋಣ ಅಂದ್ರೆ ಆಗಲ್ಲ. ಲೋಕಸಭಾ ಚುನಾವಣೆ ಮುಗಿದ ನಂತರ ಎಲ್ಲಾ ನಿರ್ಧಾರ ಆಗುತ್ತೆ ಎಂದು ವಾಗ್ದಾಳಿ ನಡೆಸಿದ್ದರು.
ವಿಪಕ್ಷ ನಾಯಕ ಅಶೋಕ್ ಮಾತಾಡಿ, ನಾನು ಸಹ 2 ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ದಿಸಿದ್ದೆ. ಸಿ.ಟಿ.ರವಿ, ರಮೇಶ್ ಜಾರಕಿಹೊಳಿ ಅಸಮಾಧಾನ ಸರಿಪಡಿಸಲಾಗಿದೆ. ವಿ.ಸೋಮಣ್ಣ, ಯತ್ನಾಳ್ ಕುರಿತು 2% ರಷ್ಟು ಬಾಕಿಯಿದೆ. ಎಲ್ಲರನ್ನೂ ಸಮಾಧಾನ ಮಾಡ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಮಾತಾಡಿ, ಯತ್ನಾಳ ಯಾವತ್ತೂ ಪಕ್ಷದ ಪರ ಬದ್ಧವಾಗಿರುವ ವ್ಯಕ್ತಿ. ಕೆಲವು ವೈಯಕ್ತಿಕ ವ್ಯತ್ಯಾಸಗಳು ಬಂದೇ ಬರುತ್ತವೆ. ಯತ್ನಾಳ್, ಸೋಮಣ್ಣ ಎಲ್ಲರೂ ಪಕ್ಷಕ್ಕಾಗಿ ದುಡಿಯುತ್ತೇವೆ. ಇದೆಲ್ಲವನ್ನು ಅರಗಿಸಿಕೊಂಡು ಮುಂದೆ ಹೋಗುವ ಶಕ್ತಿ ಬಿಜೆಪಿಗೆ ಇದೆ ಅಂದಿದ್ದಾರೆ.