ಬೆಂಗಳೂರು: ಶರಾವತಿ ಯೋಜನೆಯಿಂದ (Sharavati Project) ಭೂಮಿ ಕಳೆದುಕೊಂಡವರಿಗೆ ಜಮೀನು ಹಕ್ಕು ನೀಡುವ ಪ್ರಕ್ರಿಯೆ ಪ್ರಾರಂಭ ಮಾಡಲಾಗಿದೆ. ಈ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ತಿಳಿಸಿದರು.
ಗೃಹ ಸಚಿವ ಆರಗ (Araga Jnanendra) ನೇತೃತ್ವದಲ್ಲಿ ಶರಾವತಿ ಸಂತ್ರಸ್ತರ ಸಮಸ್ಯೆ ಕುರಿತು ಸಭೆ ನಡೆಸಲಾಯಿತು. ಸಭೆ ಬಳಿಕ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಶರಾವತಿ ಸಂತ್ರಸ್ತರಿಗೆ ತಾವು ಉಳುಮೆ ಮಾಡುವ ಜಮೀನು ಹಕ್ಕು ನೀಡುವುದು 60 ವರ್ಷದ ಸಮಸ್ಯೆ ಆಗಿತ್ತು. ಮೊನ್ನೆ ಕೇಂದ್ರ ಅರಣ್ಯ ಸಚಿವರ ಭೇಟಿ ಮಾಡಿದ್ವಿ. ಅವರು ಎಲ್ಲಾ ಸರ್ವೆ ಮಾಡಿ ಪ್ರಪೋಸಲ್ ಕಳಿಸಿ ಎಂದಿದ್ದಾರೆ. ಹೀಗಾಗಿ ಪ್ರಸ್ತಾವನೆ ಸಿದ್ಧ ಪಡಿಸಲಾಗಿದೆ ಎಂದರು.
Advertisement
Advertisement
ಶರಾವತಿ ಯೋಜನೆಗೆ ಭೂಮಿ ಕೊಟ್ಟವರಿಗೆ ಈಗ ಭೂಮಿ ಇಲ್ಲದಂತೆ ಆಗಿದೆ. ಈಗಾಗಲೇ ಜಿಲ್ಲಾಡಳಿತ ಸರ್ವೆ ಮಾಡಿ ಪ್ರಸ್ತಾವನೆ ಸಿದ್ಧಪಡಿಸಿದೆ. ಸುಮಾರು 9 ಸಾವಿರ ಎಕರೆ ಜಮೀನು ಹಕ್ಕು ನೀಡುವುದಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸುತ್ತೇವೆ. ಸಂತ್ರಸ್ತರ ಸಮಸ್ಯೆ ಪರಿಹಾರ ಮಾಡೋ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಕಮಲ ಪೇಂಟಿಂಗ್ – ಸಂಸದ ತೇಜಸ್ವಿ ಸೂರ್ಯ ವಿರುದ್ಧ BBMP ಗರಂ
Advertisement
Advertisement
ಇವತ್ತೇ ಕೇಂದ್ರ ಸರ್ಕಾರಕ್ಕೆ ಪ್ರಪೋಸಲ್ ಕಳಿಸಿಕೊಡುತ್ತೇವೆ. 11-12 ಸಾವಿರ ಕುಟುಂಬಕ್ಕೆ ಇದರಿಂದ ಪರಿಹಾರ ಸಿಗಲಿದೆ ಎಂದು ಯಡಿಯೂರಪ್ಪ ತಿಳಿಸಿದರು. ಸಭೆಯಲ್ಲಿ ಸಚಿವ ಆರಗ ಜ್ಞಾನೇಂದ್ರ, ಸಂಸದ ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ ಉಪಸ್ಥಿತಿ ಇದ್ದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ನಿರ್ಮಾಣ – ನೇಪಾಳದಿಂದ ಬಂತು 6 ಕೋಟಿ ವರ್ಷ ಹಳೆಯ ಸಾಲಿಗ್ರಾಮ ಬಂಡೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k