ಬೆಂಗಳೂರು: ಶಿಕಾರಿಪುರದಲ್ಲಿ ಯಡಿಯೂರಪ್ಪ ಉತ್ತರಾಧಿಕಾರಿಯನ್ನಾಗಿ ವಿಜಯೇಂದ್ರ ಘೋಷಣೆ ಬೆನ್ನಲ್ಲೇ ವರುಣಾ ಕ್ಷೇತ್ರದ ಸುತ್ತ ನಾನಾ ಚರ್ಚೆಗಳು ನಡೆಯುತ್ತಿದೆ.
Advertisement
ಈ ಹಿಂದೆಯೇ ಸಿದ್ದರಾಮಯ್ಯಗೆ ವರುಣಾ ರಹಸ್ಯ ತಿಳಿದಿತ್ತು ಎನ್ನಲಾಗಿದೆ. ಎರಡು ಮೂರು ತಿಂಗಳ ಹಿಂದೆ ಆ ಒಂದೇ ಒಂದು ಅನಿರೀಕ್ಷಿತ ಕರೆ ಮಾಡಿ ಸೌಜನ್ಯಯುತವಾಗಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಮಾತನಾಡುವಾಗ ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ ಎಂಬ ಬಗ್ಗೆ ಬಿಎಸ್‍ವೈ ಸುಳಿವು ಕೊಟ್ಟಿದ್ರು ಎನ್ನಲಾಗಿದೆ. ಅಲ್ಲದೆ ಏರ್‌ಪೋರ್ಟ್ ಲಾಂಚ್‌ನಲ್ಲಿ ಸಿಕ್ಕಾಗಲೂ ಕೂಡ ಅದೇ ಸುಳಿವನ್ನು ಮುಂದುರಿಸಿದ್ರು ಆಗಲೇ ಸಿದ್ದರಾಮಯ್ಯ ಕೊಂಚ ನಿರಾಳರಾಗಿ ಆಪ್ತರ ಬಳಿ ವಿಜಯೇಂದ್ರ ಸ್ಪರ್ಧೆ ಮಾಡಲ್ಲ ಎಂದು ಹೇಳಿಕೊಂಡಿದ್ದರು ಎಂಬ ಬಗ್ಗೆ ಆಪ್ತ ಮೂಲಗಳಿಂದ ಗುಸುಗುಸು ಕೇಳಿಬಂದಿದೆ. ಇದನ್ನೂ ಓದಿ: ಸುರಕ್ಷತೆ ಮರೆತ ಬಿಎಂಟಿಸಿ – ಕಳ್ಳರ ಅಡ್ಡವಾದ ಬಸ್‍ಗಳು
Advertisement
Advertisement
ವರುಣಾದಲ್ಲಿ ಯಾವ ಸ್ಟಾರ್ ಫೈಟ್ ನಡೆಯಲ್ಲ ಎಂದು ಹೇಳಿದ್ದರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಹಾಗಾದ್ರೆ ಎರಡ್ಮೂರು ತಿಂಗಳಿನಿಂದಲೂ ಯಡಿಯೂರಪ್ಪ ಮಾನಸಿಕವಾಗಿ ಸಿದ್ಧವಾಗಿದ್ರಾ? ಶಿಕಾರಿಪುರಕ್ಕೆ ವಿಜಯೇಂದ್ರ ಪಟ್ಟಕ್ಕೆ ಪೂರ್ವ ತಯಾರಿ ನಡೆಸಿದ್ರಾ ಎಂಬ ಪ್ರಶ್ನೆಗಳು ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಕಸದ ವಾಹನಗಳ ಮೇಲೆ BBMP ನಾಮಫಲಕ ಹಾಕುವಂತಿಲ್ಲ – ಹೆಸರು ಹಾಕಿದ ವಾಹನಗಳ ಮೇಲೆ ಕ್ರಿಮಿನಲ್ ಕೇಸ್
Advertisement
ಚುನಾವಣಾ ರಾಜಕೀಯದಿಂದ ಬಿಎಸ್‍ವೈ ನಿವೃತ್ತಿ ಮತ್ತು ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಕುರಿತ ಯಡಿಯೂರಪ್ಪ ಘೋಷಣೆಗಳಿಂದ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ರಾಜ್ಯ ಬಿಜೆಪಿ ನಾಯಕರು ಶಾಕ್‍ಗೆ ಒಳಗಾಗಿದ್ದು, ಹೈಕಮಾಂಡ್‍ಗೆ ಮಾಹಿತಿ ರವಾನಿಸಲಾಗಿದೆ. ಬಿಎಸ್‍ವೈ ನಿರ್ಧಾರದ ಹಿಂದೆ ಹಲವು ಲೆಕ್ಕಾಚಾರ ಇದೆ ಎನ್ನಲಾಗುತ್ತಿದೆ. ತಾವು ರಾಜಕೀಯವಾಗಿ ಸಮರ್ಥರಾಗಿರುವಾಗಲೇ ಪುತ್ರನ ರಾಜಕೀಯ ಭವಿಷ್ಯವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂಬ ಲೆಕ್ಕಾಚಾರ ಯಡಿಯೂರಪ್ಪನವರಿಗೆ ಇದ್ದಂತಿದೆ. ಈ ಬಗ್ಗೆ ಸ್ವಪಕ್ಷದವರಿಂದಲೇ ವಿರೋಧ, ಅಪಸ್ವರ ಕೇಳಿ ಬರುತ್ತಿದೆ. ಇನ್ನೊಂದೆಡೆ ಈ ಬಗ್ಗೆ ಹೈಕಮಾಂಡ್ ಸೂಕ್ಷ್ಮವಾಗಿ ನಿಭಾಯಿಸುವ ಸಾಧ್ಯತೆ ಹೆಚ್ಚಿದೆ.