ಬೆಂಗಳೂರು: ಶಿವಮೊಗ್ಗ ಒಳ್ಳೆಯ ನಾಡು, ಮೂರು ಮುಖ್ಯಮಂತ್ರಿಗಳನ್ನ ನೀಡಿದೆ. ಪಕ್ಷ ಬೇಧ ಏನೇ ಇರಲಿ. ಯಡಿಯೂರಪ್ಪ ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆ. ಆದರೆ ಈ ರೀತಿ ಗಲಾಟೆ ಮಾಡಿದರೆ ಯಾವ ಇನ್ವೆಸ್ಟರ್ ಬರ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿ ನಾಗರಿಕರನ್ನು ಈಶ್ವರಪ್ಪ ಬದುಕಿದ್ದಾಗಲೇ ಸಾಯಿಸುತ್ತಿದ್ದಾರೆ. ಆರ್ಥಿಕ ವಹಿವಾಟಿನ ಮೇಲೂ ಹೊಡೆತ ಆಗಿದೆ. ಯಾರನ್ನಾದರೂ ಬಂಧಿಸಲಿ, ಯಾರ ಮೇಲೂ ನಮಗೆ ಮುಲಾಜಿಲ್ಲ. ಒಟ್ಟಿನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಡಿಕೆಶಿ ಆಗ್ರಹಿಸಿದರು.
ಶಿವಮೊಗ್ಗದಲ್ಲಿ ಕೊಲೆ ಆಗಿದೆ ಘಟನೆ ನಡೆಯಬಾರದಿತ್ತು. 144 ಸೆಕ್ಷನ್ ಇದ್ದಾಗಲೂ ಸಚಿವರೊಬ್ಬರು ನೇತೃತ್ವ ವಹಿಸಿದ್ದರಿಂದ ಅಷ್ಟು ದೊಡ್ಡ ಗಲಭೆಗೆ ಕಾರಣವಾಯ್ತು. ಈಶ್ವರಪ್ಪಗೆ ಮೆದುಳಿಗು, ನಾಲಿಗೆಗೂ ಲಿಂಕ್ ಇಲ್ಲಾ ಅಂತ ಸಿದ್ದರಾಮಯ್ಯ ಆಗಾಗ ಹೇಳ್ತಾರೆ ಅದು ನಿಜಾ ಅನ್ನಿಸುತ್ತೆ ಅಂತಹ ಮಾತನ್ನಾಡಿದ್ದಾರೆ, ಆಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೊಲೆಯಾದ ಹರ್ಷನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ- ಡಿಜಿಪಿ ಸ್ಪಷ್ಟನೆ
ಕಾಂಗ್ರೆಸ್ ನಾಯಕರ ಆಹೋರಾತ್ರಿ ಧರಣಿ ಮುಂದುವರಿದಿದ್ದು, 5 ರಾತ್ರಿ ವಿಧಾನಸೌಧದಲ್ಲಿ ಪ್ರಜಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರಧ್ವಜಕ್ಕೆ ಆದ ಅವಮಾನ ರಕ್ಷಣೆ ಮಾಡಲು ಹೋರಾಟ ಮಾಡುತ್ತಿದ್ದೇವೆ. 52 ಜನ ಶಾಸಕರು ಮಲಗಿದ್ದೇವೆ. ಇಂದು ಸಹ ಧರಣಿ ಮುಂದುವರಿಸುತ್ತೇವೆ. ಸದನ ಮೊಟಕು ಮಾಡ್ತಾರೆ ಅಂತ ಆಂತರಿಕ ಮಾಹಿತಿ ಬಂದಿದೆ. ಮೊಟಕು ಮಾಡಿದರೆ ರಾಜ್ಯಪಾಲರಿಗೆ ದೂರು ನೀಡುತ್ತೇವೆ. ದೇಶದ್ರೋಹಿ ಸಚಿವರ ವಜಾಕ್ಕೆ ಒತ್ತಾಯಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ