ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Loksabha Election) ಬಿಜೆಪಿ-ಜೆಡಿಎಸ್ (BJP- JDS) ನಡುವೆ ದೋಸ್ತಿ ಕುದುರ್ತಿರೋ ಹೊತ್ತಲ್ಲಿಯೇ ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ದೆಹಲಿಗೆ ಹೊರಟುನಿಂತಿದ್ದಾರೆ.
ಬುಧವಾರ ವರಿಷ್ಠರನ್ನು ಭೇಟಿ ಮಾಡಲಿರುವ ಮಾಜಿ ಸಿಎಂ, ಮೈತ್ರಿ ಸೇರಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಎಷ್ಟು ಕ್ಷೇತ್ರಗಳನ್ನು ಉಳಿಸಿಕೊಂಡ್ರೆ ಉತ್ತಮ, ಎಷ್ಟು ಸೀಟ್‌ಗಳನ್ನು ಪಡೆಯಬೇಕು..? ಎಲ್ಲೆಲ್ಲಿ ಪಕ್ಷದ ಸ್ಥಿತಿಗತಿ ಹೇಗಿದೆ ಎಂಬೆಲ್ಲಾ ವಿಚಾರಗಳ ಬಗ್ಗೆ ಯಡಿಯೂರಪ್ಪ ವರದಿ ಸಲ್ಲಿಸಲಿದ್ದಾರೆ. ಇದನ್ನೂ ಓದಿ: 10 ದಿನಗಳೊಳಗೆ ಉತ್ತರ ಕೊಡುವಂತೆ ಬಿ.ಕೆ ಹರಿಪ್ರಸಾದ್‌ಗೆ ನೋಟಿಸ್
ಇತ್ತ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿಯ ಪದಾಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿಯೂ ದೋಸ್ತಿ ರಾಜಕಾರಣದ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆದಿದೆ. ಲೋಕಸಭೆ ಚುನಾವಣೆ ತಯಾರಿ, ಪಕ್ಷ ಸಂಘಟನೆ, ರಾಜ್ಯ ಪ್ರವಾಸ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸುವುದು.. ಪರಿಷತ್ ಚುನಾವಣೆ.. ಹೀಗೆ ಹಲವು ವಿಚಾರಗಳ ಬಗ್ಗೆ ಬಿಜೆಪಿ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ.
ಸಭೆಯಲ್ಲಿ ಕೆಲವರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಾಳೆಯೂ ಸಭೆ ನಡೆಯಲಿದೆ. ಅಸಹಾಯಕರು ಮೈತ್ರಿ ಮಾಡ್ಕೊಳ್ತಿದ್ದಾರೆ ಎಂಬ ಶೆಟ್ಟರ್ ಹೇಳಿಕೆಗೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಮಾತಾಡ್ತಾ, ದೆಹಲಿಗೆ ಹೋಗೋಕೆ ಇನ್ನೂ ಟೈಂ ಇದೆ ಅಂದ್ರು. ರೇವಣ್ಣ ಅವ್ರಂತೂ, ನಾವು ಬಿಜೆಪಿ ಜೊತೆ ಹೋದ್ರೆ ಇವ್ರಿಗೇನು ತೊಂದ್ರೆ ಅಂತಾ ಗರಂ ಆದ್ರು.
Web Stories