– ಎಲ್ಲರೂ ಎಲ್ಲದನ್ನೂ ಕೇಳುತ್ತಾರೆ: ಅದಕ್ಕೂ ನನಗೂ ಸಂಬಂಧ ಇಲ್ಲ
ಬೆಂಗಳೂರು: ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರು ಯಾವ ವಿಷಯಕ್ಕೆ ದೆಹಲಿಗೆ ಬರಲು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಬರಲು ಹೇಳಿದ್ದಾರೆ, ಅದಕ್ಕಾಗಿ ತೆರಳುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (B.S Yediyurappa) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕೆಲವು ಮುಖಂಡರು ಸ್ಥಾನಮಾನ ಕೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಎಲ್ಲರೂ ಎಲ್ಲದನ್ನೂ ಕೇಳುತ್ತಾರೆ, ಅದಕ್ಕೂ ನನಗೂ ಸಂಬಂಧ ಇಲ್ಲ. ಅದರ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಇಂದು ನಂದಿಗಿರಿಧಾಮ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧ ತೆರವು; ನಾಳೆ ಬಂದ್ – ಜಿಲ್ಲಾಡಳಿತ ಮರು ಆದೇಶ
ರಾಷ್ಟ್ರೀಯ ಅಧ್ಯಕ್ಷರ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಸಾಧ್ಯವಾದರೆ ಭೇಟಿಯಾಗಿ ವಾಪಾಸ್ ಆಗುತ್ತೇನೆ. ಇಲ್ಲವೇ ನಾಳೆ (ಸೋಮವಾರ) ಕರ್ನಾಟಕಕ್ಕೆ ಮರಳುತ್ತೇನೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಲಿದ್ದಾರೆ. ಅದರಲ್ಲಿ ಭಾಗವಹಿಸಲು ವಾಪಾಸ್ ಆಗುವ ಅನಿವಾರ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: BJP ಹೈಕಮಾಂಡ್ ಬುಲಾವ್ – ಇಂದು ಬಿಎಸ್‌ವೈ ದೆಹಲಿಗೆ
Web Stories