ಬೆಂಗಳೂರು: ಎಷ್ಟು ಸಾಧ್ಯವೋ ಅಷ್ಟು ಬೇಗ ಈ ಸರ್ಕಾರ ಕಿತ್ತೊಗೆಯೋಣ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಸಂಕಲ್ಪ ಮಾಡಿದ್ದಾರೆ.
ಬೆಂಗಳೂರಿನ (Bengaluru) ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ (BJP Workers) ಸಭೆಯಲ್ಲಿ ಮಾತನಾಡಿದ ಅವರು, ಈ ಸರ್ಕಾರವನ್ನು ಕಿತ್ತೊಗೆಯೋಣ. ಅದಕ್ಕಾಗಿ ನಾನು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕೂತು ಪ್ರತಿಭಟನೆ ಮಾಡ್ತೇನೆ. ಎಲ್ಲರೂ ಕೈ ಜೋಡಿಸಿ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರ ಎಲ್ಲಾ ಸಮಸ್ಯೆಗಳನ್ನು ಎದುರಿಸುವಷ್ಟು ಶಕ್ತವಾಗಿದೆ: ಸಿದ್ದರಾಮಯ್ಯ
Advertisement
Advertisement
14 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಕೊಟ್ಟ ಗ್ಯಾರಂಟಿ (Congress Guarantee) ನಂಬಿ ಜನ ಮೋಸ ಹೋಗಿದ್ದಾರೆ. ಕಾಂಗ್ರೆಸ್ ಸುಳ್ಳಿನ ಗ್ಯಾರಂಟಿ ಪರಿಣಾಮದಿಂದಲೇ ನಾವು 100 ಸ್ಥಾನ ಗೆಲ್ಲೋದಕ್ಕೂ ಸಾಧ್ಯವಾಗಲಿಲ್ಲ. ವಿಧಾನಸಭೆ ಹೊರಗೆ, ಒಳಗೆ ಹೋರಾಟ ಮಾಡಬೇಕಿದೆ. ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣ, ಅದಕ್ಕೆ ಕಂಡೀಷನ್ ಹಾಕಿದ್ದಾರೆ. ಇದು ಮಹಿಳೆಯರಿಗೆ ಮಾಡಿದ ಅಪಮಾನ. ಹೆಜ್ಜೆಹೆಜ್ಜೆಗೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಬೇಕಿದೆ. ನಮ್ಮವರು 65 ಜನ ಇದ್ದಾರೆ. ಇದು ಕಡಿಮೆ ಸಂಖ್ಯೆಯೇನಲ್ಲಾ. ಇಷ್ಟು ಶಾಸಕರು ಇರೋವಾಗ ಯೋಚನೆ ಮಾಡುವ ಅವಶ್ಯಕತೆ ಇಲ್ಲ. ಗ್ಯಾರಂಟಿ ಈಡೇರಿಸುವಂತೆ ಬೀದಿಗಿಳಿಯಬೇಕು ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
Advertisement
Advertisement
ಎಷ್ಟು ಬೇಗ ಸಾಧ್ಯವೋ ಅಷ್ಟುಬೇಗ ಈ ಸರ್ಕಾರವನ್ನ ಕಿತ್ತೊಗೆಯೋಣ. ನಾವು ಮನಸ್ಸು ಮಾಡಿದ್ರೆ, ವಿಧಾನ ಮಂಡಲವನ್ನೇ ನಡುಗಿಸಬಹುದು. ಮುಂದಿನ ಸರ್ಕಾರ ರಚನೆ ಮಾಡುವವರೆಗೂ ಪಕ್ಷ ಕಟ್ಟೋಣ, ಹೋರಾಟ ಮಾಡೋಣ. ಲೋಕಸಭಾ ಚುನಾವಣೆ ಗೆಲ್ಲೋಣ ಎಂದು ಕಾರ್ಯಕರ್ತರನ್ನ ಹುರಿದುಂಬಿಸಿದ್ದಾರೆ.
ಕಾರ್ಯಕರ್ತರಿಂದ ಸಭೆಯಲ್ಲಿ ಗದ್ದಲ:
ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಮುಖಂಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಇದನ್ನೂ ಓದಿ: ಚುನಾವಣೆಯಲ್ಲಿ ಫೋರ್, ಸಿಕ್ಸ್ ಹೊಡೆಯೋಕ್ ಹೋಗಿ ಬೌಲ್ಡ್ ಆಗಿದ್ದೀನಿ – ಸೋಮಣ್ಣ
ದಾಸರಹಳ್ಳಿ ಶಾಸಕ ಮುನಿರಾಜು ಭಾಷಣ ಮಾಡುತ್ತಿದ್ದ ವೇಳೆ ರೊಚ್ಚಿಗೆದ್ದ ಕಾರ್ಯಕರ್ತರು ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶಗಳು ಸಿಗ್ತಿಲ್ಲ. ಕಾರ್ಯಕರ್ತರು ತಪ್ಪು ಮಾಡಿದಾಗ ಬುದ್ದಿ ಹೇಳ್ತೀರಾ, ಅದೇ ನಾಯಕರು ತಪ್ಪುಮಾಡಿದಾಗ ಯಾಕೆ ಬುದ್ದಿ ಹೇಳಲ್ಲ? ಹಿಂದೆ ಯಡಿಯೂರಪ್ಪ ಅವರನ್ನ ಕೆಳಗಿಳಿಸಿದಾಗ ಯಾಕೆ ನಾಯಕರು ಮಾತನಾಡಲಿಲ್ಲ? ಎಂದು ಗದ್ದಲ ಶುರು ಮಾಡಿದರು.
ಈ ವೇಳೆ ಕಾರ್ಯಕರ್ತರನ್ನ ಸಮಾಧಾನಪಡಿಸುವ ಪ್ರಯತ್ನ ಮಾಡಿದ ಮುನಿರಾಜು ಬೆನ್ನಿಗೆ ಚೂರಿ ಹಾಕಿದವರನ್ನ ಪಕ್ಷದಿಂದ ದೂರ ಇಡೋಣ, ಸಾಮಾನ್ಯ ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡೋಣ ಎಂದು ಹೇಳಿದರು.