ಶಿವಮೊಗ್ಗ: ಶಿಕಾರಿಪುರದಿಂದ ಇವತ್ತು ನಾಮಪತ್ರ ಸಲ್ಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ತಮ್ಮ ಬಳಿ 7.23 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.
ಯಾವುದು ಎಷ್ಟು?
ಚರಾಸ್ತಿ 71,30,040 ಲಕ್ಷ ರೂ. ಇದ್ದರೆ ಸ್ಥಿರಾಸ್ತಿ- 6,52,29,147 ಕೋಟಿ ರೂ., ಆದಾಯ 12.33 ಲಕ್ಷ. 2.658 ಕೆಜಿ ಚಿನ್ನ, 84 ಕೆಜಿ ಬೆಳ್ಳಿ ಹಾಗೂ 1 ಲಕ್ಷ ರೂ. ನಗದು. 2 ಟೊಯೋಟಾ ಫಾರ್ಚುನರ್ ಕಾರ್, 1 ದ್ವಿಚಕ್ರ ವಾಹನವಿದೆ ಎಂದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.
Advertisement
ಗುಂಡ್ಲು ಪೇಟೆಯ ಚುನಾವಣೆ ವೇಳೆ 2 ಕೇಸ್, 2 ಭ್ರಷ್ಟಾಚಾರ ಕೇಸ್ ಸೇರಿ ಒಟ್ಟು ನನ್ನ ಮೇಲೆ 6 ಪ್ರಕರಣಗಳು ದಾಖಲಾಗಿದೆ ಎಂದು ಬಿಎಸ್‍ವೈ ಮಾಹಿತಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 2008ರಲ್ಲಿ 75 ಕೋಟಿ ಇದ್ದ ಡಿಕೆಶಿ ಆಸ್ತಿ ಈಗ 548 ಕೋಟಿ ರೂ.ಗೆ ಏರಿಕೆ!
Advertisement
ಯಾವ ವರ್ಷ ಎಷ್ಟು ಆಸ್ತಿ ಇತ್ತು?
2008ರ ವಿಧಾನಸಭಾ ಚುನಾವಣೆಯ ವೇಳೆ 1,82,30,030 ರೂ. ಮೌಲ್ಯದ ಆಸ್ತಿ ತೋರಿಸಿದ್ದರೆ, 2014ರ ಲೋಕಸಭಾ ಚುನಾವಣೆಯ ವೇಳೆ ತನ್ನ 6,97,46,267 ರೂ. ಮೌಲ್ಯದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದರು.