ಬೆಂಗಳೂರು: ಮಾರ್ಚ್ 5 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಇವತ್ತು ನಡೆದ ಸಂಪುಟ ಸಭೆಯಲ್ಲಿ ಬಜೆಟ್ ಅಧಿವೇಶನ, ವಿಧಾನಮಂಡಲದ ಜಂಟಿ ಅದಿವೇಶನಕ್ಕೆ ದಿನಾಂಕ ನಿಗದಿ ಮಾಡಲಾಗಿದೆ.
ಫೆಬ್ರವರಿ 17ರಿಂದ 21ರ ತನಕ ವಿಧಾನಸಭೆ ಜಂಟಿ ಅಧಿವೇಶನ ನಡೆಯಲಿದ್ದು, ಫ್ರೆಬ್ರವರಿ 17 ರಂದು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಮಾರ್ಚ್ 2 ರಿಂದ ಬಜೆಟ್ ಅಧಿವೇಶನ ನಡೆಯಲಿದ್ದು, ಮಾರ್ಚ್ 5ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ.
Advertisement
Advertisement
ಹಣಕಾಸು ಸಚಿವರಾಗಿರುವ ಸಿಎಂ ಯಡಿಯೂರಪ್ಪ ತಮ್ಮ 7ನೇ ಬಜೆಟ್ ಮಂಡಿಸಲಿದ್ದಾರೆ. ಇದೇ ವೇಳೆ ಬೆಂಗಳೂರಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೂ ಸಂಪುಟ ಒಪ್ಪಿಗೆ ನೀಡಿದ್ದು, ನವೆಂಬರ್ 3,4,5 ಕ್ಕೆ ಜಿಮ್ ಸಮಾವೇಶ ನಡೆಯಲಿದೆ.
Advertisement
ಸಂಪುಟ ಸಭೆ ನಿರ್ಣಯಗಳು:
– ನವೆಂಬರ್ 3,4,5ಕ್ಕೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ
– ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಾಸಕರಿಗೆ ಅವಕಾಶ
– ಕೆಪಿಎಸ್‍ಸಿಯಲ್ಲಿ ಎ ಮತ್ತು ಬಿ ಗ್ರೇಡ್ ಹುದ್ದೆಗಳಿಗೆ ಸಂದರ್ಶನ ರದ್ದು
– ಮೈಸೂರು ಟರ್ಫ್ ಕ್ಲಬ್ ಗುತ್ತಿಗೆ ಮತ್ತೆ 30 ವರ್ಷಗಳಿಗೆ ನವೀಕರಣ
– ಚಿಲ್ಲರೆ ವ್ಯಾಪಾರ ಕ್ಷೇತ್ರಗಳಲ್ಲಿ ಮಹಿಳೆಯರು ರಾತ್ರಿಪಾಳಿಯಲ್ಲಿ ಕೆಲಸ ಮಾಡಲು ಅನುಮತಿ
– ಕನಿಷ್ಠ 10 ವರ್ಷ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ನ್ಯಾಷನಲ್ ಲಾ ಸ್ಕೂಲ್‍ನಲ್ಲಿ ಶೇಕಡಾ 25% ರಷ್ಟು ಮೀಸಲಾತಿ
– ಬೆಂಗಳೂರು ಟರ್ಫ್ ಕ್ಲಬ್ ನಿಂದ 37.46 ಕೋಟಿ ಬಾಡಿಗೆ ವಸೂಲಿಗೆ ಕ್ರಮ