ಬೆಂಗಳೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ರಾಜಭನದಲ್ಲಿ ಬಿಎಸ್‍ವೈ ಪ್ರಮಾಣ ವಚನ ಸ್ವೀಕಾರಮಾಡಲಿದ್ದು, ಇದಕ್ಕಾಗಿ ರಾಜಭವನದಲ್ಲಿ ಸಲಕ ಸಿದ್ಧತೆ ಕೂಡ ನಡೆದಿದೆ. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರದ ಪ್ರಯುಕ್ತ ವೀರಗಾಸೆ ನೃತ್ಯ ಮತ್ತು ಇತರೆ ಸಾಂಸ್ಕೃತಿಕ ಕಲಾಪ್ರಕಾರಗಳ ವೈಭವ ಏರ್ಪಟ್ಟಿದ್ದು, ರಾಜಭವನದ ಬಳಿ ಒಂದು ರೀತಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
Advertisement
ಬೆಳಗ್ಗೆ 10.20: ಸಿಎಂ ಕಚೇರಿಯಲ್ಲಿ ಪೂಜೆ ನೆರವೇರಿಸಿದ ಬಿ.ಎಸ್.ಯಡಿಯೂರಪ್ಪ
Advertisement
ಬೆಳಗ್ಗೆ 10.15: ವಿಧಾನಸೌಧದ ಮೂರನೇ ಕೊಠಡಿಗೆ ಆಗಮಿಸಿದ ನೂತನ ಸಿಎಂ
Advertisement
ಬೆಳಗ್ಗೆ 10.10: ಶಿವಮೊಗ್ಗದ ಸಿಎಂ ಮನೆ ಮುಂದೆ ಪಟಾಕಿ ಸಿಡಿಸಿ ಸಿಹಿ ಹಂಚಿ ಕಾರ್ಯಕರ್ತರಿಂದ ಸಂಭ್ರಮಾಚರಣೆ
Advertisement
ಬೆಳಗ್ಗೆ 10.00: ವಿಧಾನ ಸೌಧದ ಮೆಟ್ಟಿಲಿಗೆ ನಮಸ್ಕರಿಸಿದ ನೂತನ ಸಿಎಂ
ಬೆಳಗ್ಗೆ 9.30: ಕೆಲವೇ ಕ್ಷಣಗಳಲ್ಲಿ ಸಿಎಂ ಯಡಿಯೂರಪ್ಪ ವಿಧಾನಸೌಧಕ್ಕೆ ಆಗಮನ
ಬೆಳಗ್ಗೆ 9.10: ಏಕಾಂಗಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ
ಬೆಳಗ್ಗೆ 9.05: ದೇವರ ಮತ್ತು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ
ಬೆಳಗ್ಗೆ 9.00: ಪ್ರಮಾಣ ವಚನ ಸ್ವೀಕಾರ ಮಾಡ್ತೀರೋ ಬಿ.ಎಸ್.ಯಡಿಯೂರಪ್ಪ.
ಬೆಳಗ್ಗೆ 9.00: ಗಾಜಿನ ಮನೆಯತ್ತ ರಾಜ್ಯಪಾಲ ವಜೂಭಾಯಿ ವಾಲಾ ಆಗಮನ
ಬೆಳಗ್ಗೆ 9.00: ರಾಜಭವನದ ಗಾಜಿನ ಮನೆಯಲ್ಲಿ ಸಂಭ್ರಮದ ವಾತಾವರಣ
ಬೆಳಗ್ಗೆ 8.50: ರಾಜಭವನ ತಲುಪಿದ ಬಿ.ಎಸ್.ಯಡಿಯೂರಪ್ಪ
ಬೆಳಗ್ಗೆ 8.45: ರಾಜಭವನದತ್ತ ತೆರಳುತ್ತಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾರ್ಗ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆಯ ಬಿಸಿ
ಬೆಳಗ್ಗೆ 8.40: ರಾಜಭವನದತ್ತ ಹೊರಟ ಬಿ.ಎಸ್.ಯಡಿಯೂರಪ್ಪ
ಬೆಳಗ್ಗೆ 8.35: ರಾಜಭವನದ ಮುಂಭಾಗದಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ
ಬೆಳಗ್ಗೆ 8.30: ಮುನ್ನೇಚ್ಚರಿಕೆ ಕ್ರಮವಾಗಿ ರಾಜಭವನದ ಮುಂಭಾಗದಲ್ಲಿ 16 ಸಾವಿರ ಪೊಲೀಸರ ನಿಯೋಜನೆ
ಬೆಳಗ್ಗೆ 8:25: ರಾಧಾಕೃಷ್ಣ ದೇಗುಲದಲ್ಲಿ ಬಿ.ಎಸ್.ಯಡಿಯೂರಪ್ಪ ಪೂಜೆ