ಚಿಕ್ಕಬಳ್ಳಾಪುರ: ಸಂಸದ ಎಂ.ವೀರಪ್ಪ ಮೊಯ್ಲಿ ವಿರುದ್ಧ ಮಾಜಿ ಸಿಎಂ ಯಡಿಯೂರಪ್ಪ ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, ಕೇಂದ್ರ ಸಂಸದನಾಗಿ ಅವನು ಕ್ಷೇತ್ರವನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ ಎಂದು ಟೀಕೆ ಮಾಡಿದ್ದಾರೆ.
ನಗರದಲ್ಲಿ ಬರ ಸಮೀಕ್ಷೆ ಬಳಿಕ ಮಾತನಾಡಿದ ಅವರು, ವೀರಪ್ಪ ಮೊಯ್ಲಿಗೆ ಒಬ್ಬ ಸಂಸದನಾಗಿ, ಮಾಜಿ ಮುಖ್ಯಮಂತ್ರಿ ತನ್ನ ಕ್ಷೇತ್ರವನ್ನು ಸರಿಯಾಗಿ ನೋಡಿಕೊಳ್ಳಲು ಬಂದಿಲ್ಲ. ಬರಗಾಲದ ಬಗ್ಗೆ ಸರ್ಕಾರದ ಗಮನಕ್ಕೆ ಸಮಸ್ಯೆ ತರಲಿ. ಸಂಸದರಾಗಿ ಎಷ್ಟು ಬಾರಿ ಕ್ಷೇತ್ರದಲ್ಲಿ ಬರ ಪರಿಶೀಲನೆ ಮಾಡಿದ್ದಾರೆ ಎಂದು ಗರಂ ಆಗಿ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಪ್ರಿಯಾಂಕ ಗಾಂಧಿ ಆಗಮನದಿಂದ ಕಾಂಗ್ರೆಸ್ಸಿಗೆ ನೂರು ಆನೆಬಲ ಬಂದಿದೆ: ವೀರಪ್ಪ ಮೊಯ್ಲಿ
ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದನ್ನು ಮೊದಲು ಬಿಡಲಿ. ಸುಮ್ಮನೇ ಕೇಂದ್ರ ಸರ್ಕಾರದ ವಿರುದ್ಧ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಆರೋಪ ಮಾಡುವುದಲ್ಲ. ಮೊಯ್ಲಿ ಅವರು ತಮ್ಮ ಕ್ಷೇತ್ರದ ಸಮಸ್ಯೆಯನ್ನು ಪ್ರಧಾನಿಯವರಿಗಾಗಲಿ, ಕೇಂದ್ರ ಸರ್ಕಾರದ ಗಮನಕ್ಕಾಗಲಿ ತಂದಿದ್ದಾರಾ? ಎಷ್ಟು ಬಾರಿ ಕ್ಷೇತ್ರದಲ್ಲಿ ಬರ ಪರಿಶೀಲನೆ ನಡೆಸಿದ್ದಾರೆ ಎಂದು ಪ್ರಶ್ನಿಸಿದರು.
ಬಿಎಸ್‍ವೈ ಮಾತಿಗೆ ಚಪ್ಪಾಳೆ ತಟ್ಟಿದ ಬಿಜೆಪಿ ಮುಖಂಡರ ವಿರುದ್ಧವೂ ಯಡಿಯೂರಪ್ಪ ಗರಂ ಆದ ಪ್ರಸಂಗ ನಡೆಯಿತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv