Connect with us

ಸಿಎಂ ಜೈಲು ಟ್ವೀಟ್‍ಗೆ ಬಿಎಸ್‍ವೈ ತಿರುಗೇಟು

ಸಿಎಂ ಜೈಲು ಟ್ವೀಟ್‍ಗೆ ಬಿಎಸ್‍ವೈ ತಿರುಗೇಟು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಹೋದ ಬಳಿಕ ಬಿಎಸ್ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ನಡುವಿನ ಟ್ವಿಟ್ಟರ್ ವಾರ್ ಬಿರುಸುಗೊಂಡಿದೆ.

ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಎಂದು ಲೇವಡಿ ಮಾಡಿದ್ದ ಸಿಎಂ ಸಿದ್ದರಾಮಯ್ಯಗೆ ಬಿಎಸ್‍ವೈ ತೀಕ್ಷ್ಣವಾಗಿ ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಸ್‍ವೈ, 2012ರಲ್ಲಿ ನಾನು ನಿದೋರ್ಷಿ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಕಾನೂನು ಪದವಿ ಓದಿ ನ್ಯಾಯತಂತ್ರ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲವೆಂದರೆ ಅದು ನೀವು ಸಂವಿಧಾನಕ್ಕೆ ತೋರುವ ಅಗೌರವ ಅಂತ ಪ್ರತಿಕ್ರಿಯಿಸಿದ್ದಾರೆ. ಪ್ರಚಾರಕ್ಕಾಗಿ ನಿಮ್ಮ ಬೌದ್ಧಿಕ ದಾರಿದ್ರ್ಯವನ್ನು ನಾಡಿನ ಜನತೆ ಮುಂದೆ ನೀವೇ ತೋರುತ್ತಿದ್ದೀರಿ ಅಂತ ಬಿಎಸ್‍ವೈ ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ:  ರಮ್ಯಾ ಹೆಸರಲ್ಲೇ ರಮ್ ಇದೆ, ಟ್ವೀಟ್ ಮಾಡುವಾಗೆಲ್ಲ ರಮ್ಯಾ ಕುಡಿದಿರುತ್ತಾರೆ ಅನ್ಸುತ್ತೆ: ಶಿಲ್ಪಾ ಗಣೇಶ್

ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಮಾತನಾಡಿದ ಬೆನ್ನಲ್ಲೇ ಸಂಸದೆ ಹಾಗೂ ನಟಿ ರಮ್ಯಾ ಮೋದಿಯ ಕಾಲೆಳೆದಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಶಾಸಕ ಜಮೀರ್ ಅಹಮದ್ ರಮ್ಯಾ ನಡೆಗೆ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೇ ನಟ ಜಗ್ಗೇಶ್ ಕೂಡ ರಮ್ಯಾ ವಿರುದ್ಧ ಕಿಡಿ ಕಾರಿದ್ದರು. ಇದನ್ನೂ ಓದಿ: 2013ರ ಟ್ವೀಟ್ ಎತ್ತಿ ಮೋದಿ ವಿರುದ್ಧ ರಮ್ಯಾ ವಾಗ್ದಾಳಿ

Advertisement
Advertisement