ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಹೋದ ಬಳಿಕ ಬಿಎಸ್ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ನಡುವಿನ ಟ್ವಿಟ್ಟರ್ ವಾರ್ ಬಿರುಸುಗೊಂಡಿದೆ.
Advertisement
ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಎಂದು ಲೇವಡಿ ಮಾಡಿದ್ದ ಸಿಎಂ ಸಿದ್ದರಾಮಯ್ಯಗೆ ಬಿಎಸ್‍ವೈ ತೀಕ್ಷ್ಣವಾಗಿ ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಸ್‍ವೈ, 2012ರಲ್ಲಿ ನಾನು ನಿದೋರ್ಷಿ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಕಾನೂನು ಪದವಿ ಓದಿ ನ್ಯಾಯತಂತ್ರ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲವೆಂದರೆ ಅದು ನೀವು ಸಂವಿಧಾನಕ್ಕೆ ತೋರುವ ಅಗೌರವ ಅಂತ ಪ್ರತಿಕ್ರಿಯಿಸಿದ್ದಾರೆ. ಪ್ರಚಾರಕ್ಕಾಗಿ ನಿಮ್ಮ ಬೌದ್ಧಿಕ ದಾರಿದ್ರ್ಯವನ್ನು ನಾಡಿನ ಜನತೆ ಮುಂದೆ ನೀವೇ ತೋರುತ್ತಿದ್ದೀರಿ ಅಂತ ಬಿಎಸ್‍ವೈ ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ರಮ್ಯಾ ಹೆಸರಲ್ಲೇ ರಮ್ ಇದೆ, ಟ್ವೀಟ್ ಮಾಡುವಾಗೆಲ್ಲ ರಮ್ಯಾ ಕುಡಿದಿರುತ್ತಾರೆ ಅನ್ಸುತ್ತೆ: ಶಿಲ್ಪಾ ಗಣೇಶ್
Advertisement
Advertisement
ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಮಾತನಾಡಿದ ಬೆನ್ನಲ್ಲೇ ಸಂಸದೆ ಹಾಗೂ ನಟಿ ರಮ್ಯಾ ಮೋದಿಯ ಕಾಲೆಳೆದಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಶಾಸಕ ಜಮೀರ್ ಅಹಮದ್ ರಮ್ಯಾ ನಡೆಗೆ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೇ ನಟ ಜಗ್ಗೇಶ್ ಕೂಡ ರಮ್ಯಾ ವಿರುದ್ಧ ಕಿಡಿ ಕಾರಿದ್ದರು. ಇದನ್ನೂ ಓದಿ: 2013ರ ಟ್ವೀಟ್ ಎತ್ತಿ ಮೋದಿ ವಿರುದ್ಧ ರಮ್ಯಾ ವಾಗ್ದಾಳಿ
Advertisement
ಚೆಕ್‍ನಲ್ಲಿಯೇ ಲಂಚ ಪಡೆದು ಜೈಲಿಗೆ ಹೋಗಿ ಬಂದವರು ಯಡಿಯೂರಪ್ಪನವರು. ಅವರಜೊತೆಗಿರುವ ಕಟ್ಟಾ ಸುಬ್ರಮಣ್ಯನಾಯ್ಡು, ಜನಾರ್ಧನಾ ರೆಡ್ಡಿ,ಕೃಷ್ಣಯ್ಯ ಶೆಟ್ಟಿ ಎಲ್ಲರೂ ಪರ್ಸೆಂಟೇಜ್ ವ್ಯವಹಾರದಲ್ಲಿ ತಜ್ಞರು. ಅವರನ್ನೇ #NarendraModi ಕೇಳಬಹುದಿತ್ತು.
— Siddaramaiah (@siddaramaiah) February 5, 2018
ನಾನು ನಿರ್ದೋಷಿ ಎಂದು ಹೈಕೋರ್ಟ್ 7.3.2012ರಲ್ಲಿ ತೀರ್ಪು ನೀಡಿದೆ. ನೀವು ಕಾನೂನು ಓದಿ ನ್ಯಾಯತಂತ್ರ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲವೆಂದರೆ ಅದು ನೀವು ಸಂವಿಧಾನಕ್ಕೆ ತೋರುವ ಅಗೌರವ.
ಪ್ರಚಾರಕ್ಕಾಗಿ ನಿಮ್ಮ ಬೌದ್ಧಿಕ ದಾರಿದ್ರ್ಯವನ್ನು ನಾಡಿನ ಜನತೆ ಮುಂದೆ ನೀವೇ ತೋರುತ್ತಿದ್ದೀರಿ, ಸಿದ್ದರಾಮಯ್ಯನವರೆ.
— B.S.Yediyurappa (@BSYBJP) February 5, 2018
24 ಹಿಂದೂಗಳ ಹತ್ಯೆ,ದಕ್ಷ ಅಧಿಕಾರಿಗಳ ವರ್ಗಾವಣೆ,ಅನುಮಾನಾಸ್ಪದ ಸಾವು, 3500ಕ್ಕೂ ಹೆಚ್ಚು ರೈತರ ಆತ್ಮಹತ್ಯೆ,ಟಿಪ್ಪು ಜಯಂತಿಯ ಕೋಮುಗಲಭೆ ಸಮಯದಲ್ಲಿ ಮುಖ್ಯಮಂತ್ರಿಯಾಗಿ ಅಪರಾಧ ತಡೆಯುವಲ್ಲಿ ವಿಫಲರಾದ
ನೀವು ಭ್ರಷ್ಟಾಚಾರರಹಿತ ಆಡಳಿತ ಎನ್ನುವುದು ಹಾಸ್ಯಾಸ್ಪದ.ನಮ್ಮ
ಹೆಮ್ಮೆಯ ಪ್ರಧಾನಿಗೆ ಪಾಠ ಮಾಡಲು ನಿಮ್ಮಲ್ಲಿ ಸ್ವಲ್ಪವಾದರೂ ನೈತಿಕತೆ ಇದೆಯೇ?
— B.S.Yediyurappa (@BSYBJP) February 5, 2018