ಬೆಂಗಳೂರು: ಬಜೆಟ್ ಅಧಿವೇಶನದ ಮೊದಲದಿನ ವಿಧಾನಸಸಭೆಯಲ್ಲಿ ಕುಳಿತಿರುವಾಗ ಬಿ.ಎಸ್.ಯಡಿಯೂರಪ್ಪ ಅವರ ಕೈಗೊಂದು ರಹಸ್ಯ ಚೀಟಿ ಬಂದಿದ್ದು, ಅದನ್ನು ಓದಿದ ಮಾಜಿ ಸಿಎಂ ಯಾರಿಗೂ ಸಿಗಬಾರದೆಂದು ಹರಿದು ಹಾಕಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಏನಿತ್ತು ಚೀಟಿಯಲ್ಲಿ?
ಯಡಿಯೂರಪ್ಪನವರು ಕುಳಿತಿದ್ದ ಜಾಗಕ್ಕೆ ಬಂದ ಕಾರ್ಕಳ ಶಾಸಕ ಸುನಿಲ್ ಚೀಟಿಯೊಂದನ್ನು ನೀಡಿದರು. ಚೀಟಿಯಲ್ಲಿ ಸದನಕ್ಕೆ ಗೈರಾದ ಕರುಣಾಕರ ರೆಡ್ಡಿ, ದೊಡ್ಡನಗೌಡ, ಚಂದ್ರಪ್ಪ ಹೆಸರು ಇತ್ತು ಎಂದು ಹೇಳಲಾಗಿದೆ.
Advertisement
Advertisement
ಗೈರಾದ ಕೈ ಶಾಸಕರು ಯಾರು?:
ಕಾಂಗ್ರೆಸ್‍ನ ಒಟ್ಟು 9 ಜನ ಶಾಸಕರು ಸದನಕ್ಕೆ ಗೈರಾಗಿದ್ದಾರೆ. ರಮೇಶ್ ಜಾರಕಿಹೊಳಿ (ಗೋಕಾಕ್), ಉಮೇಶ್ ಜಾಧವ್ (ಚಿಂಚೋಳಿ), ನಾಗೇಂದ್ರ (ಬಳ್ಳಾರಿ ಗ್ರಾಮಾಂತರ), ಬಿ.ಸಿ.ಪಾಟೀಲ್ (ಹಿರೇಕೆರೂರು), ಗಣೇಶ್ (ಕಂಪ್ಲಿ), ಮಹೇಶ್ ಕುಮಟಳ್ಳಿ (ಅಥಣಿ), ಸುಧಾಕರ್ (ಚಿಕ್ಕಬಳ್ಳಾಪುರ), ಎಸ್.ರಾಮಪ್ಪ (ಹರಿಹರ) ಹಾಗೂ ಸೌಮ್ಯಾ ರೆಡ್ಡಿ (ಜಯನಗರ) ಅವರು ಸದನಕ್ಕೆ ಗೈರಾಗಿದ್ದಾರೆ.
Advertisement
ಜೆಡಿಎಸ್‍ನ ನಾರಾಯಣಗೌಡ (ಕೆ.ಆರ್.ಪೇಟೆ) ಪಕ್ಷೇತರ ಶಾಸಕರಾದ ಶಂಕರ್ (ರಾಣೇಬೆನ್ನೂರು) ಹಾಗೂ ನಾಗೇಶ್ (ಮುಳಬಾಗಿಲು) ಮೊದಲ ದಿನದ ಸದನಕ್ಕೆ ಹಾಜರಾಗಿಲ್ಲ. ಇತ್ತ ಬಿಜೆಪಿ 104 ಶಾಸಕರಲ್ಲಿ ನಾಲ್ವರು ಗೈರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಶಾಸಕ ಲಿಂಗಣ್ಣ (ಮಾಯಕೊಂಡ), ಅತೃಪ್ತ ಕಾಂಗ್ರೆಸ್ ಶಾಸಕರ ಕಾವಲಿಗೆ ನಿಂತಿರುವ ಅಶ್ವತ್ಥ್ ನಾರಾಯಣ (ಮಲ್ಲೇಶ್ವರಂ), ಅರವಿಂದ ಲಿಂಬಾವಳಿ (ಮಹಾದೇವಪುರ), ಬಾಲಚಂದ್ರ ಜಾರಕಿಹೊಳಿ (ಅರಭಾವಿ) ಕೂಡ ಸದನಕ್ಕೆ ಹಾಜರಾಗಿಲ್ಲ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv