ಮೈಸೂರು: ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರ ಟಿಕೆಟ್ ನೀಡದಿರಲು ನಿರ್ಧರಿಸಿದ್ದು ನಾನೇ, ಇದರಲ್ಲಿ ಯಾವುದೇ ಕೇಂದ್ರ ನಾಯಕರು ಮಧ್ಯ ಪ್ರವೇಶಿಸಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ನಾನೇ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರಿಗೆ ಕ್ಷೇತ್ರದಲ್ಲಿ ಪ್ರವಾಸ ಮಾಡುವಂತೆ ಹೇಳಿದ್ದೆ. ಆದರೆ ಕೇವಲ 15 ದಿನಗಳಲ್ಲಿ ವಿಜಯೇಂದ್ರ ಕ್ಷೇತ್ರದ ಜನರ ಪ್ರೀತಿಯನ್ನು ಗಳಿಸಿದ್ದು ನೋಡಿ ನನ್ನ ತೀರ್ಮಾನವನ್ನು ಬದಲಿಸಿದ್ದೇನೆ. ವಿಜಯೇಂದ್ರ ಅವರ ಸೇವೆ ಮೈಸೂರು ಭಾಗಕ್ಕೆ ಅಗತ್ಯವಿದ್ದು, ಕೇವಲ ವರುಣಾ ಕ್ಷೇತ್ರಕ್ಕೆ ಸಿಮೀತವಾಗದೇ ಚಾಮರಾಜನಗರ ಸೇರಿದಂತೆ ಮೈಸೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಶ್ರಮಿಸುವಂತೆ ಸೂಚಿಸಿದ್ದಾಗಿ ಹೇಳಿರುವುದಾಗಿ ಬಿಎಸ್‍ವೈ ತಿಳಿಸಿದರು.
ಬಿಜೆಪಿ ರಾಜ್ಯಾಧಕ್ಷರಾಗಿ ನನ್ನನ್ನು ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಈ ವಿಚಾರದಲ್ಲಿ ಕೇಂದ್ರದ ಯಾವುದೇ ನಾಯಕರು ಹಾಗೂ ಹೈಕಮಾಂಡ್ ಈ ಕುರಿತು ನಿರ್ಧಾರ ಕೈಗೊಂಡಿಲ್ಲ. ಆರ್ ಎಸ್‍ಎಸ್ ನಾಯಕರು ಸಹ ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದೇ ವೇಳೆ ವರುಣಾ ಸೇರಿದಂತೆ ಮೈಸೂರಿನ ಇತರೇ ಎಲ್ಲಾ ಕ್ಷೇತ್ರಗಳ ಜನರು ಬಿಎಸ್‍ವೈ ಹಾಗೂ ವಿಜಯೇಂದ್ರ ಅವರೇ ಅಭ್ಯರ್ಥಿಗಳು ಎಂದು ಭಾವಿಸಿ ಯಾರೇ ಅಲ್ಲಿನ ಅಭ್ಯರ್ಥಿಯಾದರು ಮತ ನೀಡಿ ಎಂದು ಮನವಿ ಮಾಡಿದರು.
ವರುಣಾ ಕ್ಷೇತ್ರದ ಕಾರ್ಯಕರ್ತರಲ್ಲಿ ನಮ್ಮ ವರ್ತನೆ ನೋವು ತಂದಿದೆ ಅದ್ದರಿಂದ ಅವರ ಕ್ಷಮೆ ಕೇಳುತ್ತೇವೆ. ನಾಳೆಯಿಂದ ವಿಜಯೇಂದ್ರ ಅವರು ಮತ್ತೆ ಕ್ಷೇತ್ರ ಪ್ರವಾಸವನ್ನು ಮುಂದುವರಿಸುತ್ತಾರೆ. ನಾನು ಸಹ ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತೇನೆ ಎಂದರು.ಇದನ್ನೂ ಓದಿ: ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?
ಈ ವೇಳೆಯು ಬಿಎಸ್‍ವೈ ಅವರನ್ನು ಮುತ್ತಿಗೆ ಹಾಕಿದ ಕಾರ್ಯಕರ್ತರು ವಿಜಯೇಂದ್ರ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಕೈ ತಪ್ಪಿದ ವರುಣಾ ಕ್ಷೇತ್ರ ಟಿಕೆಟ್ – ಕಾರ್ಯಕರ್ತರ ತೀವ್ರ ಆಕ್ರೋಶ