ಬೆಂಗಳೂರು: ಲಿಂಗಾಯತ ಮುಖಂಡರ ಬೇಡಿಕೆ ಕೇಳಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ಲಿಂಗಾಯತ ಸಮುದಾಯದ ಮುಖಂಡರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಇಂದು ಅಭಿನಂದಿಸಿದರು. ಈ ವೇಳೆ ಮುಖಂಡರು ತಮ್ಮ ಸಮುದಾಯದ ಶಾಸಕರ ಪರ ಬ್ಯಾಟ್ ಬಿಸಿ, ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದರು. ಅದನ್ನು ಕೇಳಿದ ಬಿ.ಎಸ್.ಯಡಿಯೂರಪ್ಪ ಅವರು ಮುಖಂಡರ ವಿರುದ್ಧ ಫುಲ್ ಗರಂ ಆದರು.
Advertisement
ಬಿಜೆಪಿಯಲ್ಲಿ ಒಟ್ಟು 16 ಲಿಂಗಾಯತ ಶಾಸಕರಿದ್ದಾರೆ. ಈ ಪೈಕಿ ನಾಲ್ವರಿಗೆ ಸಚಿವ ಸ್ಥಾನ ಕೊಡುವಂತೆ ಲಿಂಗಾಯತ ಮುಖಂಡರು ಸಿಎಂಗೆ ಮನವಿ ಮಾಡಿಕೊಂಡರು. ಮುಖಂಡರ ಮಾತಿನಿಂದ ಕೆರಳಿದ ಸಿಎಂ, ನಾಲ್ಕು ಸಚಿವರು ಸಾಕಾ? ಯಾಕೆ ಐವರು ಶಾಸಕರನ್ನು ಮಂತ್ರಿ ಮಾಡೋದು ಬೇಡ್ವಾ ಎಂದು ಏರುಧ್ವನಿಯಲ್ಲಿ ಗದರಿಸಿದರು.
Advertisement
ಅಷ್ಟೇ ಅಲ್ಲದೇ ಇರೋ ಬರೋ ಸಚಿವ ಸ್ಥಾನವನೆಲ್ಲ ನಿಮಗೆ ಕೊಟ್ಟರೆ ರಾಜೀನಾಮೆ ಕೊಟ್ಟ ಅತೃಪ್ತ ಶಾಸಕರು ವಿಷ ಕುಡಿಯಬೇಕಾ ಎಂದು ಪ್ರಶ್ನಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪನವರ ಧ್ವನಿ ಜೋರಾಗುತ್ತಿದ್ದಂತೆ ಲಿಂಗಾಯತ ಮುಖಂಡರು ತಣ್ಣಗಾದರು.