ಈಶ್ವರಪ್ಪ ಡ್ರೆಸ್‍ಗೆ ಬಿಎಸ್‍ವೈ ಫುಲ್ ಫಿದಾ!

Public TV
1 Min Read
BSY KWE

ಬೆಂಗಳೂರು: ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಧರಿಸಿರುವ ಡ್ರೆಸ್‍ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಬೆಂಗಳೂರಿನ ವಸಂತ ನಗರದ ಕೊಡವ ಸಮಾಜ ಆವರಣದಲ್ಲಿ ನಡೆದ ರಾಜ್ಯ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಈಶ್ವರಪ್ಪ ಭಾಗವಹಸಿದ್ದ ವೇಳೆ ಘಟನೆ ನಡೆದಿದೆ.

vlcsnap 2018 03 21 21h49m27s920

ಕಾರ್ಯಕಾರಿಣಿ ಸಭೆಯ ವೇದಿಕೆಯ ಮೇಲೆ ಆಗಮಿಸುತ್ತಿದ್ದಂತೆ ಯಡಿಯೂರಪ್ಪ ಅವರು ಈಶ್ವರಪ್ಪರನ್ನು ನೋಡಿ ಮುಗಳ್ನಕ್ಕು ಕೈ ಸನ್ನೆಯ ಮೂಲಕ ಡ್ರೆಸ್ ಗೆ ಕಮೆಂಟ್ ಮಾಡಿದರು. ಏನ್ರಿ ಈಶ್ವರಪ್ಪ ಇದು ಡ್ರೆಸ್, ಶಾಲು ಕೂಡ ಚೆನ್ನಾಗಿದೆ ಎಂದ ಬಿಎಸ್ ವೈ ಪ್ರಶ್ನೆಗೆ ಹೊಸದು ಎಂದು ಶಾಲು ಹಿಡಿದು ತೋರಿಸಿ ಈಶ್ವರಪ್ಪ ಉತ್ತರಿಸಿದ್ರು ಅಂತಾ ಹೇಳಲಾಗಿದೆ.

vlcsnap 2018 03 21 21h48m57s995

ಕಾರ್ಯಕ್ರಮದಲ್ಲಿ ಮಾತನಾಡಿದ ಈಶ್ವರಪ್ಪ, ಏಪ್ರಿಲ್ 3 ರಂದು ಕನಕದಾಸರ ನೆಲೆ ಕಾಗಿನೆಲೆಯಲ್ಲಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗವಹಿಸುತ್ತಾರೆ. ಸಿದ್ದರಾಮಯ್ಯ ಅವರು ನನ್ನ ಜೊತೆ ಹಿಂದುಳಿದವರು ಇದ್ದಾರೆ ಅಂತಾ ಅಂದ್ಕೊಂಡಿದ್ದಾರೆ. ಒಂದು ಕಾಲದಲ್ಲಿ ಸಿಎಂ ಹಿಂದುಳಿದ ನಾಯಕರಾಗಿದ್ರು, ಆದ್ರೆ ಸಿಎಂ ಆದ್ಮೇಲೆ ಸಿದ್ದರಾಮಯ್ಯ ಹಿಂದುಳಿದವರನ್ನ, ದಲಿತರನ್ನ ಮರೆತಿದ್ದಾರೆ. ಹಿಂದುಳಿದವರ ಪರ ಇರೋದು ಬಿಜೆಪಿ, ಬಿಎಸ್ ವೈ ಅಂತಾ ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *