ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮುಂದೆ ಸಿದ್ದರಾಮಯ್ಯ ಬಚ್ಚಾ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿ ಅವರು ಯಡಿಯೂರಪ್ಪ ರಾಜಕೀಯದಲ್ಲಿ ಅತ್ಯಂತ ಬೇಜವಾಬ್ದಾರಿಯುತ ಮನುಷ್ಯ. ಯಡಿಯೂರಪ್ಪಗೆ ರಾಜಕೀಯ ಸಂಸ್ಕೃತಿ ಇಲ್ಲ. ಅವರಿಗೆ ಸಂಸದೀಯ ಪದಗಳೇ ಗೊತ್ತಿಲ್ಲ. ನಾನು ಮೋದಿ, ಯಡಿಯೂರಪ್ಪ ಇಬ್ಬರನ್ನು ಹೋಲಿಕೆ ಮಾಡಿಕೊಳ್ಳುವುದಿಲ್ಲ. 40 ವರ್ಷಗಳಿಂದ ಸಾರ್ವಜನಿಕ ರಾಜಕೀಯದಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.
Advertisement
Advertisement
ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದ ಮೇಲೆ ಅಚ್ಚೇ ದಿನ ಬರುತ್ತದೆ ಎನ್ನುವ ಬಿಎಸ್ ವೈ ಹೇಳಿಕೆಗೂ ತಿರುಗೇಟು ನೀಡಿದ ಅವರು, ಅಚ್ಚೇ ದಿನ ಬರುತ್ತೆ ಅಂತ ಹೇಳಿದ್ದು ಯಾರು? ಮೋದಿ ಹೇಳಿ ಎಷ್ಟು ದಿನ ಆಯ್ತು? ಕ್ಯಾ ಅಚ್ಚೇ ದಿನ್ ಆಗಯಾ ಕ್ಯಾ ಅಂತ ಹಿಂದಿಯಲ್ಲೇ ಪ್ರಶ್ನೆ ಮಾಡಿದರು. ಬಿಜೆಪಿಯವರು ತಿಪ್ಪರಲಾಗ ಹಾಕಿದ್ರೂ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲಿ ಸಾಧ್ಯವಿಲ್ಲ. ಬಿಜೆಪಿ ನಾಯಕರು, ಯಡಿಯೂರಪ್ಪ ಹತಾಶರಾಗಿದ್ದಾರೆ. ಅದಕ್ಕೆ ಏನೇನೋ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಗೊತ್ತಾಗಿದೆ ಅದ್ದರಿಂದಲೇ ಅವರು ಹೀಗೆ ಕಿತಾಪತಿ ಮಾಡುತ್ತಿದ್ದಾರೆ. ಸತ್ತ ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
ನನ್ನನ್ನು ಕಂಡರೆ ಮೋದಿಗೆ ಭಯ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಈ ವಿಚಾರವನ್ನು ಕಲಬುರಗಿಯಲ್ಲಿ ನಡೆದ ನವಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಬಿಎಸ್‍ವೈ ಪ್ರಸ್ತಾಪಿಸಿ, ಮೋದಿ ಮುಂದೆ ಸಿದ್ದರಾಮಯ್ಯ ಬಚ್ಚಾ, ನಾಚಿಕೆಯಾಗಬೇಕು ನಿಮಗೆ ಎಂದು ಹೇಳಿದ್ದರು. ಅಲ್ಲದೇ ಸಿಎಂ ರಾಜ್ಯದಲ್ಲಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
Advertisement
ರಾಜ್ಯಕ್ಕೆ ಸ್ಬಚ್ಛ ಹಾಗೂ ಜನಪರ ಆಡಳಿತ ನೀಡುವ ಸರ್ಕಾರ ಬೇಕು. ಅದಕ್ಕಾಗಿ ರಾಜ್ಯಾದ್ಯಂತ ಪರಿವರ್ತನಾ ಯಾತ್ರೆ ನಡೆಸುತ್ತಿದ್ದೇವೆ. ಅದರ ಅಂಗವಾಗಿ ಇಂದು ಕಲಬುರಗಿ ನಗರದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ಸರ್ಕಾರ ಬಂದ ನಂತರ ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಪ್ರತಿ ವರ್ಷ ೫೦೦ ಕೋಟಿ ರು. ನೀಡಲಾಗುವುದು.#ParivartanaYatre
— B.S.Yediyurappa (@BSYBJP) December 9, 2017
ನಮ್ಮ ಸರ್ಕಾರ ಇದ್ದಾಗ ಕಲಬುರಗಿಯಲ್ಲಿ ಮೂರು ಬಾರಿ ಸಚಿವ ಸಂಪುಟ ಸಭೆ ನಡೆಸಿದ್ದೆವು. ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸಾಕಷ್ಟು ಕೆಲಸಮಾಡಿದೆ. ಈ ಸರ್ಕಾರಕ್ಕೆ ಅಭಿವೃದ್ಧಿ ಬಿಡಿ, ತೊಗರಿಬೇಳೆಗೆ ಬೆಂಬಲ ಬೆಲೆ ನೀಡುವ ಕನಿಷ್ಠ ಕಾಳಜಿಯೂ ಇಲ್ಲ.#ParivartanaYatre #NorthGulbarga #SouthGulbarga
— B.S.Yediyurappa (@BSYBJP) December 9, 2017