ರಾಜ್ಯದ ಜನತೆಗೆ ಸಿಎಂ ಮನವಿ- ಇತ್ತ 1 ವರ್ಷದ ವೇತನ ನೀಡಿದ ಬಿಎಸ್‍ವೈ

Public TV
1 Min Read
BSY 1 1

ಬೆಂಗಳೂರು: ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮನವಿ ಮಾಡಿದ್ದು, ಇನ್ನೊಂದೆಡೆ ಕೋವಿಡ್-19 ನಿರ್ವಹಣೆಗೆ ತಮ್ಮ ಒಂದು ವರ್ಷದ ವೇತನವನ್ನು ದೇಣಿಗೆಯಾಗಿ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಸಿಎಂ, ಕೋವಿಡ್-19 ನಿರ್ವಹಣೆಗೆ ಒಂದು ವರ್ಷದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಒಂದು ವರ್ಷದ ಸುಮಾರು 24 ಲಕ್ಷ ರೂ. ವೇತನವನ್ನು ದೇಣಿಗೆ ಸಿಎಂ ದೇಣಿಗೆ ನೀಡಿದ್ದಾರೆ. ಅಲ್ಲದೆ ಶಾಸಕರು, ಸಂಸದರು ಹಾಗೂ ಅಧಿಕಾರಿಗಳಿಗೂ ಕೂಡ ತಮ್ಮ ಕೈಲಾದ ದೇಣಿಗೆ ಕೊಡುವಂತೆ ಇದೇ ವೇಳೆ ಸಿಎಂ ಕರೆ ಕೊಟ್ಟಿದ್ದಾರೆ.

https://twitter.com/CMofKarnataka/status/1245197884699611147

ಕೋವಿಡ್_19 ತಡೆಗೆ ಇನ್ನು 14 ದಿನಗಳ ಕಾಲ ಲಾಕ್ ಡೌನ್ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಯಾರೂ ಮನೆಯಿಂದ ಹೊರಬರದಿರುವ ಮೂಲಕ ಸೋಂಕು ಹರಡದಂತೆ ಎಚ್ಚರ ವಹಿಸುವಂತೆ ಸಿಎಂ ಮನವಿ ಮಾಡಿದ್ದಾರೆ.

ರಾಜ್ಯವು ಕೊರೊನಾ ತಡೆಯುವಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ಆದರೆ ಇನ್ನೂ ನಮಗೆ ಅಪಾಯ ತಪ್ಪಿದ್ದಲ್ಲ. ರಾಜ್ಯವು ಸೋಂಕಿತರ ಸಂಖ್ಯೆಯಲ್ಲಿ ಮೂರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಬಂದಿರುವುದು ಸಂತಸವಾಗಿದೆ. ಆದರೆ ಇನ್ನೂ 14 ದಿನ ಲಾಕ್ ಡೌನ್ ಕಟ್ಟು ನಿಟ್ಟಿನಿಂದ ಪಾಲನೆ ಆಗಬೇಕು. ಜನ ಸುರಕ್ಷತೆಯಿಂದ ಇರಿ, ಮನೆಯಲ್ಲೇ ಇರಿ. ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಿ ಎಂದು ಜನತೆಗೆ ಸಿಎಂ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *