ಬೆಂಗಳೂರು: ಬಿಜೆಪಿಯವರಿಗೆ ಚಳಿ ಜ್ವರ ಬಂದಿದೆ. ಎಸಿಬಿ ನಡುಕ ಶುರುವಾಗಿದೆ. ಅದಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಕೊಟ್ಟಿದ್ದಾರೆ ಎಂದು ಮಕ್ಕಳ ಮತ್ತು ಮಹಿಳಾ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾರು ಅವರ ದೂರವಾಣಿ ಕದ್ದಾಲಿಕೆ ಮಾಡಿದ್ದಾರೆ ಎಂದು ಅವರು ಸ್ಪಷ್ಟ ಪಡಿಸಲಿ. ಕೇಂದ್ರ ಸರ್ಕಾರದ ಅಡಿಯಲ್ಲಿ ದೂರವಾಣಿ ಇಲಾಖೆ ಇರುವಾಗ ಸುಮ್ಮನೆ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
ಶಿವರಾಮಕಾರಂತ ಬಡಾವಣೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಮೇಲೆ 2010ರಲ್ಲಿ 257.20 ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಡಿ.ನೋಟಿಫಿಕೇಶನ್ ಮಾಡಿದ್ದಾರೆ. 23 ಎಪ್ರಿಲ್ 2012 ರಲ್ಲಿ ಇದರ ಬಗ್ಗೆ ಆಗಿನ ಸಿಎಂ ಆಗಿದ್ದ ಡಿ.ವಿ.ಸದಾನಂದಗೌಡ ಸಿಐಡಿ ತನಿಖೆ ನಡೆಸಿದ್ದಾರೆ. ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿದ್ದ ಉಮೇಶ್ ಕೂಡ ತನಿಖೆ ನಡೆಸಿ ವರದಿ ನೀಡಿದ್ದಾರೆ. ಈಗ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಎಸಿಬಿ ತನಿಖೆಗೆ ವಹಿಸಿದ್ದು ಸೇಡಿನ ರಾಜಕಾರಣ ಎನ್ನುವುದಾದರೆ, ಸದಾನಂದಗೌಡರು ಸಿಐಡಿ ತನಿಖೆಗೆ ಕೊಟ್ಡಿದ್ದೂ ಸೇಡಿನ ರಾಜಕಾರಣವಲ್ಲವೇ? ಮೇಲಾಗಿ ಅಯ್ಯಪ್ಪ ದೂರು ಕೊಟ್ಟ ಎರಡು ತಿಂಗಳ ನಂತರ ಐಪಿಸಿ ಸೆಕ್ಷನ್ ಪ್ರಕಾರ ಎಸಿಬಿ ಕಾನೂನು ಕ್ರಮಕ್ಕೆ ಮುಂದಾಗಿದೆ ಎಂದು ಹೇಳಿದರು.
Advertisement
ಶಿವರಾಮಕಾರಂತ ಬಡಾವಣೆ ಅಕ್ರಮ ಡಿ ನೋಟಿಫಿಕೇಶನ್ ಪ್ರಕರಣದಲ್ಲಿ ಯಡಿಯೂರಪ್ಪ ಕೃಷ್ಣನ ಜನ್ಮಸ್ಥಳ ಸೇರೋದು ನಿಶ್ಚಿತ. ಈಗ ರಾಜ್ಯಪಾಲರಿಗೆ ದೂರು ಕೊಟ್ಟಿರುವ ಅಧಿಕಾರಿ ಹಿಂದೆ ತಿಪಟೂರು ಎಸಿ ಆಗಿದ್ದ ಸಂದರ್ಭದಲ್ಲಿ ತುಮಕೂರು ಜಿಲ್ಲೆ ತುರುವೇಕೆರೆ ಎಸಿಎಂ ಎಂ ನ್ಯಾಯಾಲಯದಲ್ಲಿ ತಮ್ಮಮಾನಸಿಕ ಸ್ಥಿತಿಯ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. 2010 ರಲ್ಲಿ ಅವರು ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿದ್ದರು. ಈಗ ಆರೋಪದಿಂದ ತಪ್ಪಿಸಿಕೊಳ್ಳಲು ಈಗ ಪತ್ರ ಬರೆಯುತ್ತಿದ್ದಾರೆ ಎಂದರು.