ಮಂಡ್ಯ; ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಎದುರಾಗಿರುವ ಆಡಿಯೋ ಸಂಕಷ್ಟ ಪರಿಹಾರಕ್ಕೆ ಬಿಜೆಪಿ ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ.
ಗ್ರಹಗತಿಗಳ ಶಾಂತಿಗಾಗಿ ಮಂಡ್ಯದ ಬಿಜೆಪಿ ಕಾರ್ಯಕರ್ತರು ಶಕ್ತಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಡ್ಯ ನಗರದ ಶಕ್ತಿ ದೇವತೆ ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಿಎಸ್ ಯಡಿಯೂರಪ್ಪ ಹೆಸರಲ್ಲಿ ಅರ್ಚನೆ ಮಾಡಿಸಿದ್ರು.
ಪೂಜೆ ಬಳಿಕ ಅಷ್ಟ ದಿಕ್ಕಿನಲ್ಲೂ ತಡೆ ಒಡೆದು ಗ್ರಹಗತಿಗಳಿಗೆ ಶಾಂತಿ ಮಾಡಿಸಿದ್ರು. ಪ್ರಮುಖವಾಗಿ ಹಾಸನದ ಮೂರು ಗ್ರಹಗಳಾದ ದೇವೇಗೌಡರು ಮತ್ತು ಅವರ ಇಬ್ಬರು ಮಕ್ಕಳು, ಕನಕಪುರದ ಎರಡು ಗ್ರಹಗಳಾದ ಡಿಕೆಶಿ ಬ್ರದರ್ಸ್ ಮೈಸೂರಿನ ಒಂದು ಗ್ರಹ ಅಂದ್ರೆ ಸಿದ್ದರಾಮಯ್ಯಗೆ ಶಾಂತಿ ಪೂಜೆ ಮಾಡಿಸಿದ್ದೇವೆ ಅಂತ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಮೈತ್ರಿ ಕೂಟದ ನಾಯಕರ ಕಾಲೆಳೆದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv