ತುಮಕೂರು: ನಾನು ಕೊಟ್ಟಿರುವ ದಾಖಲೆಗಳಲ್ಲಿ ಸಣ್ಣಪುಟ್ಟ ಲೋಪದೋಷಗಳಿದ್ದರೆ ಎಂ.ಬಿ.ಪಾಟೀಲ್ ಹೇಳಿದ್ದಂತೆ ಕೇಳಲು ನಾನು ಸಿದ್ದನಿದ್ದೇನೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ತುಮಕೂರಿನಲ್ಲಿ ರಾಜ್ಯಸಭಾ ಚುನಾವಣೆ ಬಗ್ಗೆ ಕುರಿತು ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ 50 ಕ್ಕೂ ಹೆಚ್ಚು ಜನ ಶಾಸಕರ ಬೆಂಬಲವಿದೆ. ಹಾಗಾಗಿ ನಮ್ಮ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರು ಗೆಲವು ಸಾಧಿಸುತ್ತಾರೆಂದು ವಿಶ್ವಾಸದ ಮಾತನ್ನಾಡಿದರು.
Advertisement
Advertisement
ಕಾಮಗಾರಿ ಗುತ್ತಿಗೆ ನೀಡಿರೊದ್ರಲ್ಲಿ ಅವ್ಯವಹಾರ ನಡೆದಿರೋದು ಸತ್ಯ. ಇದನ್ನು ಸಚಿವ ಎಂ.ಬಿ ಪಾಟೀಲ್ ಅವರಿಗೆ ನೇರವಾಗಿ ಕೇಳಲು ಬಯಸುತ್ತೇನೆ. ನಾನು ಕೊಟ್ಟಿರುವ ದಾಖಲೆಗಳಲ್ಲಿ ಸಣ್ಣಪುಟ್ಟ ಲೋಪದೋಷಗಳಿದ್ದರೆ ಅವರು ಹೇಳಿದ್ದಂತೆ ಕೇಳಲು ನಾನು ಸಿದ್ದನಿದ್ದೇನೆ. ಹೊರ ರಾಜ್ಯದಿಂದ ಫೇಕ್ ಸರ್ಟಿಫಿಕೇಟ್ ಗಳನ್ನು ತಂದು ಕಾಮಗಾರಿ ಮಾಡಿದ್ದೇನೆಂದು ಸವಾಲು ಹಾಕಿದ್ದಾರೆ.
Advertisement
ಎಜೆನ್ಸಿಯವರು ಅಪ್ಲೈ ಮಾಡಿದ್ದು, ಅದಕ್ಕೆ ಅನುಮತಿ ನೀಡಲಾಗಿತ್ತು. ನಾವು ಅದಕ್ಕೆ ಆಕ್ಷೇಪ ಮಾಡಿದ ಮೇಲೆ ಅವರು ಎರಡು ದಿನದ ಹಿಂದೆ ವಿತ್ ಡ್ರಾ ಮಾಡಲಾಗಿದೆ. 25 ಕೋಟಿ ಕಮಿಷನ್ ಹೊಡೆದು, ಕಾಮಗಾರಿಗೆ ಕೊಟ್ಟಿದ್ದಾರೆ. ಹೊರಗಡೆಯಿಂದ ಇಬ್ಬರನ್ನು ಕರೆದು ಇಷ್ಟು ದೊಡ್ಡ ಕಾಮಗಾರಿ ಕೊಟ್ಟಿರುವ ಉದ್ದೇಶವೇನು? ಇದು ಅಕ್ಷಮ್ಯ ಅಪರಾಧವಾಗಿದೆ. ಕಮಿಷನ್ ತೆಗೆದುಕೊಂಡ ಮೇಲೆ ವರ್ಕ್ ಕೊಡಲಾಗಿತ್ತು ಎಂದು ಎಂ.ಬಿ.ಪಾಟೀಲ್ ವಿರುದ್ದ ಅಕ್ಷಮ್ಯ ಅಪರಾಧವೆಂದು ಹರಿಹಾಯ್ದರು.