-ಕಾಟಾಚಾರಕ್ಕೆ ನಡೆದ ಬರ ಪರಿಶೀಲನೆ
ಚಾಮರಾಜನಗರ: ರೆಸಾರ್ಟ್ ರಾಜಕಾರಣ ಬಳಿಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲ ಕಮಲ ಶಾಸಕರು ಬರ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ಬರ ಪರಿಶೀಲನೆ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬರ ಪರಿಶೀಲನೆಗಾಗಿ ಯಡಿಯೂರಪ್ಪನವರು ತಮ್ಮ ತಂಡದೊಂದಿಗೆ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದರು. ಚಾಮರಾಜನಗರ ಮತ್ತು ನಂಜನಗೂಡು ಹೆದ್ದಾರಿ ಬಳಿ ನಾಯಕರು ಬರ ಪರಿಶೀಲನೆಗೆ ಮುಂದಾಗಿದ್ದರು. ಈ ವೇಳೆ ಯಡಿಯೂರಪ್ಪ ಬೆಂಬಲಿಗರು ಹೆದ್ದಾರಿ ಎಂಬುದನ್ನು ಸಹ ಅರ್ಥ ಮಾಡಿಕೊಳ್ಳದೇ ಅಡ್ಡಾದಿಡ್ಡಿಯಾಗಿ ಕಾರು ನಿಲ್ಲಿಸಿದರು. ಅರ್ಧ ರಸ್ತೆಯಲ್ಲಿ ಕಾರುಗಳು ನಿಂತಿದ್ದರಿಂದ ಕೆಲ ಸಮಯ ಟ್ರಾಫಿಕ್ ಉಂಟಾಯ್ತು. ಒಂದು ಜಮೀನಿಗೆ ತೆರಳಿದ ಯಡಿಯೂರಪ್ಪನವರು ಕೇವಲ 15 ನಿಮಿಷದಲ್ಲಿಯೇ ಬರ ಪರಿಶೀಲನೆ ಮುಗಿಸಿದರು.
Advertisement
Advertisement
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಯಾವೊಬ್ಬ ಸಚಿವ ಅಥವಾ ಶಾಸಕ ಸ್ಥಳಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಬಿಜೆಪಿ ಇಂದಿನಿಂದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದೆ. ನಾವು ಬರ ಪರಿಶೀಲನೆ ಮಾಡೋದನ್ನು ತಿಳಿದು ಸರ್ಕಾರವು ಪ್ರವಾಸ ಮಾಡುತ್ತಿದೆ. ಏಜೆಂಟರುಗಳ ಮೂಲಕ ವಿಧಾನಸೌಧಕ್ಕೆ ಕಮಿಷನ್ ಹೋಗುತ್ತಿದ್ದು, ಹಣದ ಸಮೇತ ಸಿಕ್ಕಿಬಿದ್ದ ಆರೋಪಿ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ. ಸಚಿವ ಪುಟ್ಟರಂಗಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜೀನಾಮೆ ತನಿಖೆಯನ್ನು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತನಿಖೆಯಲ್ಲಿ ಸಚಿವರು ಆರೋಪ ಮುಕ್ತವಾದ್ರೆ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಆಗ್ರಹಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv