ಕಲಬುರಗಿ: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಅಮಾನವೀಯ ಘಟನೆ ಕುರಿತು ಪ್ರತಿಕ್ರಿಯಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ ನಿರಾಕರಿಸಿದ್ದಾರೆ.
ಪ್ರಕರಣ ಸಂಬಂಧ ಕಲಬುರಗಿಯ ಐವಾನ್ ಎ ಶಾಹಿ ಅತಿಥಿ ಗೃಹಕ್ಕೆ ಮಾಧ್ಯಮದವರು ತೆರಳಿದ್ದರು. ಮೆಗ್ಗಾನ್ ಆಸ್ಪತ್ರೆಯ ಅಮಾನವೀಯ ಘಟನೆ ಬಗ್ಗೆ ಪ್ರತಿಕ್ರಿಯೆ ಕೇಳಿದ್ದಕ್ಕೆ ‘ನೋ ರಿಯಾಕ್ಟ್’ ಎಂದಷ್ಟೇ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
Advertisement
ಮುಖ್ಯಮಂತ್ರಿ ಕನಸು ಕಾಣುತ್ತಿರುವ ಬಿಎಸ್ ಯಡಿಯೂರಪ್ಪ ಅವರು ತಮ್ಮ ಸ್ವಕ್ಷೇತ್ರದಲ್ಲಿ ನಡೆದ ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡದೇ ಇರುವುದಕ್ಕೆ ಜನಸಾಮಾನ್ಯರಿಂದ ಬೇಸರ ವ್ಯಕ್ತವಾಗಿದೆ.
Advertisement
ಏನಿದು ಪ್ರಕರಣ?
ಮೆಗ್ಗಾನ್ ಆಸ್ಪತ್ರೆಯ ಕಾರಿಡಾರ್‍ನಲ್ಲಿ ವಯೋವೃದ್ಧರೊಬ್ಬರನ್ನು ಅವರ ಪತ್ನಿ ನೆಲದ ಮೇಲೆ ಮಲಗಿಸಿ ಪ್ರಾಣಿಯಂತೆ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಗುರುವಾರ ಮಧ್ಯಾಹ್ನ ಕಂಡು ಬಂದಿತ್ತು.
Advertisement
ಎರಡನೇ ಮಳಿಗೆಯಿಂದ ಈ ವೃದ್ಧರನ್ನು ಕೆಳಗೆ ಕರೆದುಕೊಂಡು ಹೋಗಲು ಗಾಲಿ ಕುರ್ಚಿ ಕೇಳಿದರೂ ಆಸ್ಪತ್ರೆ ಸಿಬ್ಬಂದಿ ಕೊಟ್ಟಿಲ್ಲ. ಎಕ್ಸ್ ರೇ ತೆಗೆಸದಿದ್ದರೆ ತೊಂದರೆ ಆದೀತು ಎಂದು ಫಾಮಿದಾ ಗಂಡನನ್ನು ಎಳೆದುಕೊಂಡು ಎಕ್ಸ್ ರೇ ತೆಗೆಸಲು ಹೋಗಿದ್ದರು.
Advertisement
ಈ ಬಗ್ಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದು ರಾಜ್ಯದ ಜನತೆಯ ಕ್ಷಮೆ ಕೇಳಿದ್ದಾರೆ. ನಮಗೆ ಈ ಸ್ಥಾನದಲ್ಲಿ ಕುಳಿತುಕೊಳ್ಳೊದಕ್ಕೂ ನಾಚಿಕ ಆಗುತ್ತದೆ.ನಾನು ಈಗಾಗಲೇ ಶಿವಮೊಗ್ಗ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಆಸ್ಪತ್ರೆಗೆ ಭೇಟಿ ಮಾಡಲು ತಿಳಿಸಿದ್ದೇನೆ. ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಮಾತನಾಡಿ ಕೂಡಲೇ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇನೆ ಅಂದ್ರು.
ಇದನ್ನೂ ಓದಿ: ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ಪ್ರಶ್ನೆ ಕೇಳಿದ್ದಕ್ಕೆ ಗರಂ ಆಗಿ ಉಡಾಫೆಯ ಉತ್ತರ ನೀಡಿದ ಸಿಎಂ