ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿಯವರ (Janardhan Reddy) ದ್ವಿತೀಯ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ (Naming Ceremony) ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಭಾಗಿಯಾಗಿದ್ದಾರೆ.
ಅದ್ಧೂರಿ ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ (Janardhan Reddy) ಮೊಮ್ಮಗಳಿಗೆ ಬಿಎಸ್‌ವೈ ಆಶೀರ್ವದಿಸಿದ್ದಾರೆ. ಇದೇ ವೇಳೆ ಯಡಿಯೂರಪ್ಪಗೆ ಶಾಲು ಹೊದಿಸಿ ರೆಡ್ಡಿ ಸನ್ಮಾನಿಸಿದ್ದಾರೆ. ಇದನ್ನೂ ಓದಿ: ನಾನು ಬೆಳೆಸಿದ ಬಿಜೆಪಿ ಪಕ್ಷದವರೇ ನನಗೆ ಕಷ್ಟ ಕೊಡುತ್ತಿದ್ದಾರೆ – ಕಾಂಗ್ರೆಸ್ ಕಡೆ ಮುಖ ಮಾಡಿದ್ರಾ ಜನಾರ್ದನ ರೆಡ್ಡಿ?
ಜನಾರ್ದನ ರೆಡ್ಡಿ ಸಹೋದರರಾದ ಶಾಸಕ ಸೋಮಶೇಖರ್ ರೆಡ್ಡಿ, ಕರುಣಾಕರ್ ರೆಡ್ಡಿ ಸಹ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿ ಶೂಟ್ ಮಾಡಿ ಅತ್ಯಾಚಾರವೆಸಗಿ ಕೊಂದ – ಮೃತದೇಹ ಪೀಸ್ ಮಾಡಿ ತಿಂದಿದ್ದ ವ್ಯಕ್ತಿ ನಿಧನ

ಇತ್ತೀಚೆಗೆ ಜನಾರ್ದನ ರೆಡ್ಡಿ ಅವರು ಬಿಜೆಪಿ (BJP) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ನಾಯಕರಿಗಿಂತ ಹೆಚ್ಚು, ಬಿಜೆಪಿ ನಾಯಕರೇ ನನಗೆ ತೊಂದರೆ ಕೊಡುತ್ತಿದ್ದಾರೆ. ನನ್ನ ರಾಜಕೀಯ ಜೀವನ ಮುಂದೆ ಹೇಗಿರುತ್ತೆ, ಅದು ನನಗೆ ಗೊತಿಲ್ಲ. ನಾನು ಬೆಳೆಸಿದ ಪಕ್ಷದವರು ನನಗೆ ಸಾಕಷ್ಟು ಕಷ್ಟ ಕೊಡುತ್ತಿದ್ದಾರೆ. ಕಾಂಗ್ರೆಸ್‌ನವರೂ ಕಷ್ಟ ಕೊಟ್ಟಿದ್ದಾರೆ. ಆದ್ರೆ ಬಿಜೆಪಿ ಅವರು ನನಗೆ ಸಾಕಷ್ಟು ಕಷ್ಟ ಕೊಡುತ್ತಿದ್ದಾರೆ ಅಸಮಾಧಾನ ಹೊರಹಾಕಿದ್ದರು. ಇದರಿಂದ ಅವರು ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಅನ್ನೋ ಚರ್ಚೆ ಹುಟ್ಟಿಕೊಂಡಿತ್ತು.



