-ಹಗ್ಗ, ದೊಣ್ಣೆ, ಕಬ್ಬಿಣದ ಪೈಪ್‌ಗಳಿಂದ ಮಹಿಳೆ ಸೇರಿ ಸಂಬಂಧಿಕರ ಮೇಲೆಯೂ ಹಲ್ಲೆ
ದಾವಣಗೆರೆ: ಮಹಿಳೆಯೊಬ್ಬರು ಪರಪುರುಷನ ಜೊತೆ ಇದ್ದರು ಎಂಬ ಕಾರಣಕ್ಕಾಗಿ ಕೆಲ ಧರ್ಮಾಂಧರು ನಡುರಸ್ತೆಯಲ್ಲಿಯೇ ಮಹಿಳೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ತಾವರೆಕೆರೆಯಲ್ಲಿ (Tavarekere) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ತೆ ಸೇರಿ ಫಯಾಜ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದು, ಮಹ್ಮದ್ ನಯಾಜ್ (32), ಮಹ್ಮದ್ ಗೌಸ್ ಪೀರ್ (45), ಚಾಂದ್ ಪೀರ್(35), ಇನಾಯಿತ್ ಉಲ್ಲಾ(51), ದಸ್ತಗೀರ್(24) ಹಾಗೂ ರಸೂಲ್ ಟಿಆರ್ (42) ಆರೋಪಿಗಳನ್ನು ಬಂಧಿಸಲಾಗಿದೆ.ಇದನ್ನೂ ಓದಿ: ವಕ್ಫ್ ಕಾಯ್ದೆ ವಿರೋಧಿಸಿ ಹಿಂಸಾಚಾರ – ಹಿಂದೂಗಳು ಮನೆಬಿಟ್ಟು ಓಡಿಹೋಗುತ್ತಿದ್ದಾರೆಂದು ಬಿಜೆಪಿ ಆರೋಪ
ಸಂತ್ರಸ್ತೆ ಸೇರಿ ಆಕೆಯ ಸಂಬಂಧಿಕರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಏ.09 ರಂದು ಸಂತ್ರಸ್ತೆ ತಮ್ಮ ಸಂಬಂಧಿಕರ ಮನೆಗೆ ಫಯಾಜ್ ಎಂಬಾತನನ್ನು ಕರೆತಂದಿದ್ದರು. ಅದೇ ಸಮಯಕ್ಕೆ ಸಂತ್ರಸ್ತೆಯ ಸಂಬAಧಿಕರ ಗಂಡ ಮನೆಗೆ ಬಂದಿದ್ದು, ಸಂತ್ರಸ್ತೆ ಹಾಗೂ ಫಯಾಜ್ ಒಂದೇ ಕೋಣೆಯಲ್ಲಿರುವುದನ್ನು ನೋಡಿದ್ದಾರೆ. ಈ ಕುರಿತು ಮಸೀದಿಯ ಮುಖಂಡರಿಗೆ ದೂರು ನೀಡಿದ್ದಾರೆ. ಬಳಿಕ ತಾವರೆಕೆರೆ ಗ್ರಾಮದ ಮಸೀದಿ ಬಳಿ ಆರು ಜನರು ಸೇರಿ ಹಗ್ಗ, ದೊಣ್ಣೆ, ಕಬ್ಬಿಣದ ಪೈಪ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಜೊತೆಗೆ ಓರ್ವ ವ್ಯಕ್ತಿ ಕಲ್ಲನ್ನು ಎತ್ತಿ ಹಾಕಲು ಎತ್ತಿ ನೋಡಿದ್ದಾನೆ.
ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾಧ್ಯಮಗಳಲ್ಲಿ ವರದಿ ಬಂದ ನಂತರ ಎಚ್ಚೆತ್ತ ಚನ್ನಗಿರಿ ಪೊಲೀಸರು (Channagiri Police) ಪ್ರಕರಣ ದಾಖಲಿಸಿಕೊಂಡು ಆರು ಹಲ್ಲೆಕೋರರನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಕೊಲೆ ಕೇಸ್ – ಪೊಲೀಸರ ಗುಂಡೇಟಿಗೆ ಆರೋಪಿ ಬಲಿ