ವಾಷಿಂಗ್ಟನ್: ಹಿಮ (Snow) ಸುನಾಮಿಗೆ ಅಮೆರಿಕ (America) -ಕೆನಡಾ (Canada) ಮತ್ತೊಮ್ಮೆ ತಲ್ಲಣಿಸಿದೆ. ಕ್ರಿಸ್‍ಮಸ್ ಸಂಭ್ರಮದ ಹೊತ್ತಲ್ಲಿ ಶೀತ ಸೂತಕ ಆವರಿಸಿದ್ದು, ಈವರೆಗೆ 38 ಮಂದಿ ಸಾವನ್ನಪ್ಪಿದ್ದಾರೆ.
ಅಮೆರಿಕದಲ್ಲಿ 34, ಕೆನಡಾದಲ್ಲಿ 4 ಜನ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ತಾಪಮಾನ ಕೆಲವು ಕಡೆ ಮೈನಸ್ 45 ಡಿಗ್ರಿಗೆ ಕುಸಿದಿದೆ. ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಅಮೆರಿಕ-ಕೆನಡಾ ಮಧ್ಯೆ ಆರ್ಕಟಿಕ್ ಬ್ಲಾಸ್ಟ್ ಹೋಗಿ ಬಾಂಬ್ ಸೈಕ್ಲೋನ್ ಆಗಿದೆ. ಅಮೆರಿಕ-ಕೆನಡಾ ನಡುವೆ ಹಿಮರಾಶಿ ಹರಡುತ್ತಲೇ ಇದೆ. ಟೆಕ್ಸಾಸ್‍ನಿಂದ ಕ್ಯೂಬೆಕ್‍ವರೆಗೆ ಸುಮಾರು 3,200 ಕಿ.ಮೀ.ವರೆಗೆ ಹಿಮ ಆವರಿಸಿದೆ.
ನ್ಯೂಯಾರ್ಕ್ (New York), ಬಫೆಲೋ ಮಿಚಿಗನ್, ಒರ್ಲಾಂಡೋ, ಡೆನ್ವರ್, ದಲ್ಲಾಸ್, ನಾಶ್‍ವಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಹೆದ್ದಾರಿಗಳಲ್ಲಿ ದಾರಿ ಕಾಣದೆ ಸರಣಿ ಅಪಘಾತಗಳಾಗಿವೆ. ಎಲ್ಲೆಂದರಲ್ಲೇ ಜನ, ವಾಹನಗಳು ಫ್ರಿಡ್ಜ್ ಆಗುತ್ತಿದ್ದಾರೆ. ಭಾರೀ ಪ್ರಮಾಣದಲ್ಲಿ ಹಿಮ ಸುರಿಯುತ್ತಿರುವ ಕಾರಣ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಓಹಿಯೋದಲ್ಲಿ ಹಿಮ ತೂಫಾನ್ ಕಾರಣದಿಂದ 50 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. ಇದನ್ನೂ ಓದಿ: ಕೊರೊನಾ ಪಾಸಿಟಿವ್ ಎಂದಾಕ್ಷಣ ನಾವು ಚೀನಾಗೆ ಹೋಲಿಕೆ ಮಾಡೋದು ಬೇಡ: ಸುಧಾಕರ್
ಹಿಮದಿಂದಾಗಿ ವಿದ್ಯುತ್ ಸಂಪರ್ಕ ಕಟ್ ಆಗಿದ್ದು, ಕೋಟ್ಯಂತರ ಜನ ಕತ್ತಲೆಯಲ್ಲಿರುವಂತಾಗಿದೆ. 3,500ಕ್ಕೂ ಹೆಚ್ಚು ವಿಮಾನಗಳ ಹಾರಾಟ ಬಂದ್ ಆಗಿದೆ. ಏರ್‌ಪೋರ್ಟ್‍ಗಳಲ್ಲಿ ಜನ ಸಾಲುಗಟ್ಟಿ ನಿಂತಿದ್ದಾರೆ. ಅಮೆರಿಕ-ಕೆನಡಾ ಗಡಿಯ ನದಿ ನೀರು ಹಿಮವಾಗಿದೆ. ಅದರಲ್ಲೂ, ವಿಶ್ವಪ್ರಸಿದ್ಧ ನಯಾಗರ ಫಾಲ್ಸ್ ಸಂಪೂರ್ಣ ಫ್ರಿಡ್ಜ್ ಆಗುವ ಹಂತಕ್ಕೆ ಬಂದಿದೆ. ಇದನ್ನೂ ಓದಿ: ಬಹುಮಹಡಿ ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಹೊತ್ತಿ ಉರಿದ ಬೆಂಕಿ – 21 ಕಾರುಗಳು ಭಸ್ಮ