ಹಾಸನ: ಕಲ್ಲು ಎತ್ತಿ ಹಾಕಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ನಂತರ ಶವದ ಮುಂದೆ ನಿಂತು ಕೊಲೆ ಮಾಡಿರುವುದಾಗಿ ಸೆಲ್ಫಿ ವೀಡಿಯೋ (Selfie Video) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಘಟನೆ ಹಾಸನ (Hassan) ನಗರದ ಬಿಟ್ಟಗೋಡನಹಳ್ಳಿ ಬೈಪಾಸ್ ರಸ್ತೆಯ ಪಕ್ಕದಲ್ಲೇ ನಡಿದಿದೆ.
ಹಾಸನ ತಾಲೂಕು, ಹೂವಿನಹಳ್ಳಿ ಕಾವಲು ಗ್ರಾಮದ ಕೀರ್ತಿ ಕೊಲೆಯಾದ ಯುವಕ. ಆಲೂರು ತಾಲೂಕಿನ, ಕಣಗಾಲ್ ಗ್ರಾಮದ ಉಲ್ಲಾಸ್ ಹಾಗೂ ಇತರರು ಕೀರ್ತಿಯನ್ನು ಕೊಲೆಗೈದು ಸೆಲ್ಪಿ ವೀಡಿಯೋ ಮಾಡಿದ್ದಾರೆ. ಕೀರ್ತಿ, ಉಲ್ಲಾಸ್ ಆಟೋ ಚಾಲಕರಾಗಿದ್ದು, ಸ್ನೇಹಿತರಾಗಿದ್ದರು. ಸೋಮವಾರ ಬೆಳಗ್ಗೆ ಕೀರ್ತಿ ಮನೆಯಿಂದ ಹೋಗಿದ್ದ. ಆನಂತರದಲ್ಲಿ ಉಲ್ಲಾಸ್ ಜೊತೆ ಜಗಳವಾಗಿತ್ತು ಎನ್ನಲಾಗಿದೆ. ಬಳಿಕ ನಿರ್ಜನ ಪ್ರದೇಶಕ್ಕೆ ಹೋಗಿದ್ದ ನಾಲ್ಕೈದು ಯುವಕರು ಗಾಂಜಾ ಸೇವಿಸಿ ನಂತರ ಕೀರ್ತಿ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿದ್ದಾರೆ. ಇದನ್ನೂ ಓದಿ: ನಾನೇ ನಿಜವಾದ ವಿರೋಧ ಪಕ್ಷದ ನಾಯಕ – ಸದನದಲ್ಲಿ ಕುರ್ಚಿ ಬದಲಾವಣೆಗೆ ಯತ್ನಾಳ್ ಗರಂ

ಸೋಮವಾರ ಸಂಜೆಯ ನಂತರ ಉಲ್ಲಾಸ್ ತನ್ನ ಇನ್ಸ್ಟಾಗ್ರಾಂ ಪೋಸ್ಟ್ ಹಾಗೂ ವ್ಯಾಟ್ಸಪ್ ಗ್ರೂಪ್‌ಗಳಲ್ಲಿ ವೀಡಿಯೋ ಹರಿಬಿಟ್ಟಿದ್ದಾರೆ. ನಾನು ಇವನನ್ನು ಮರ್ಡರ್ ಮಾಡಿದ್ದೇನೆ. ನಾನು ಈಗ ಬೆಳೆದಿದ್ದಾನೆ ಎಂದು ಹೇಳುವ ಜೊತೆಗೆ ಕೆಲವು ಅಶ್ಲೀಲ ಪದಗಳನ್ನು ಮಾತನಾಡಿದ ವೀಡಿಯೋ ಹರಿಬಿಟ್ಟಿದ್ದಾರೆ. ವೀಡಿಯೋ ನೋಡಿದ ಪೊಲೀಸರು ಕೊಲೆ ಆಗಿರುವ ಜಾಗವನ್ನು ಹುಡುಕಾಡಲು ಪರದಾಡಿದ್ದಾರೆ. ಕೊನೆಗೆ ವೀಡಿಯೋದಲ್ಲಿದ್ದ ಗ್ಯಾರೆಜ್ ವಿಳಾಸ ತಿಳಿದು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಕೀರ್ತಿ ಶವ ಪತ್ತೆಯಾಗಿದೆ. ಇದನ್ನೂ ಓದಿ: ಯಾವ ವಿಮಾನಯಾನ ಸಂಸ್ಥೆಯೂ ಕಾನೂನಿಗಿಂತ ದೊಡ್ಡದಲ್ಲ: ರಾಮ್‌ಮೋಹನ್ ನಾಯ್ಡು
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಘನತ್ಯಾಜ್ಯ ನಿರ್ವಹಣೆಗೆ ಮಂಗಳೂರಿನಿಂದ ಬೆಂಗಳೂರಿಗೆ ಹುಳ – ಡಿಸಿಎಂ ಸುಳಿವು

