– ಅತ್ಯಾಚಾರ ಶಂಕೆ, ಹಂತಕರಿಗಾಗಿ ಹುಡುಕಾಟ
ಬೆಂಗಳೂರು: ನಗರದಲ್ಲಿ ಮಹಿಳೆಯ (woman) ಭಯಾನಕ ಹತ್ಯೆ ನಡೆದಿದ್ದು, ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಮಹಿಳೆಯನ್ನ ಕೊಲೆಗೈದು ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ದುಷ್ಕರ್ಮಿಗಳು ಎಸ್ಕೇಪ್ ಆಗಿರುವಂತಹ ಘಟನೆ ಚನ್ನಮ್ಮನಕೆರೆ ಠಾಣಾ (Chennamanakere Police Station) ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ನಡೆದಿದೆ. ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆಯೂ ವ್ಯಕ್ತವಾಗಿದ್ದು, ಪ್ರಕರಣ ದಾಖಲಾಗಿದೆ.
ನಿನ್ನೆ ತಡರಾತ್ರಿ ಆಟೋದಲ್ಲಿ ಮಹಿಳೆ ಶವ ತಂದಿದ್ದ ದುಷ್ಕರ್ಮಿ, ಮೈದಾನದ ಬಳಿ ನಿಲ್ಲಿಸಿದ್ದ ಕಸದ ಲಾರಿಯಲ್ಲಿಟ್ಟು ಪರಾರಿ ಆಗಿದ್ದಾನೆ. ಆಟೋದಲ್ಲಿ ಒಬ್ಬನೇ ವ್ಯಕ್ತಿ ಬಂದಿದ್ದ ಎಂದು ಹೇಳಲಾಗುತ್ತಿದೆ. 30 ರಿಂದ 35 ವರ್ಷದ ಮಹಿಳೆ ಗುರುತು ಪತ್ತೆಗಾಗಿ ಪೊಲೀಸರಿಂದ ತನಿಖೆ ನಡೆದಿದ್ದು, ಅಪರಿಚಿತ ಮಹಿಳೆ ಶವ (Women Dead Body) ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ನಕಲಿ ಬ್ರಾಂಡೆಡ್ ಜೀನ್ಸ್ ತಯಾರಿಕಾ ಅಡ್ಡೆ ಮೇಲೆ ಪೊಲೀಸ್ ದಾಳಿ – 30 ಲಕ್ಷಕ್ಕೂ ಅಧಿಕ ಮೌಲ್ಯದ ಜೀನ್ಸ್ ಸೀಜ್
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚನ್ನಮ್ಮನಕರೆ ಅಚ್ಚುಕಟ್ಟು ಠಾಣೆಯ ಪೊಲೀಸರು (Chennamanakere Achukattu Police Station) ಕೊಲೆ ಹಂತಕರಿಗಾಗಿ ಹುಡುಕಾಟ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: Tumakuru | ಟೈಯರ್ ಬ್ಲಾಸ್ಟ್ ಆಗಿ ಮನೆಗೆ ನುಗ್ಗಿದ KSRTC ಬಸ್
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ನಿನ್ನೆ (ಶನಿವಾರ) ತಡರಾತ್ರಿ 1:40ರ ವೇಳೆಗೆ ವ್ಯಕ್ತಿಯೊಬ್ಬರು ಕಸ ಹಾಕಲು ಸ್ಕೇಟಿಂಗ್ ಗ್ರೌಂಡ್ (Skating Ground) ಬಳಿ ಬಂದಿದ್ದರು. ಈ ವೇಳೆ ಕಸದ ಗುಡ್ಡೆಯಲ್ಲಿದ್ದ ಚೀಲವೊಂದರಲ್ಲಿ ತಲೆಕೂದಲು ಕಾಣಿಸಿದೆ. ಚೀಲ ಬಿಚ್ಚಿ ನೋಡಿದಾಗ ಯುವತಿಯ ದೇಹ ಚೀಲದಲ್ಲಿರುವುದು ಗೊತ್ತಾಗಿದೆ. ತಕ್ಷಣವೇ ಮಾಹಿತಿ ನೀಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದಾರೆ. ಈ ವೇಳೆ ಒಬ್ಬನೇ ವ್ಯಕ್ತಿ ಆಟೋದಲ್ಲಿ ಮೂಟೆ ಸಮೇತ ತಂದು ಬಿಸಾಡಿ ಹೋಗಿರುವುದು ಗೊತ್ತಾಗಿದೆ. ಸದ್ಯ ಪೊಲೀಸರು ಮೃತಪಟ್ಟಿರೋದು 25-30ನೇ ವಯಸ್ಸಿನ ಯುವತಿ ಅಂತ ಅಂದಾಜಿಸಿದ್ದಾರೆ.
ಮೃತ ಯುವತಿ ಅರ್ಬನ್ ಕಂಪನಿ ಟಿ ಶರ್ಟ್ ಪ್ಯಾಂಟ್ ಧರಿಸಿರುವುದು ಕಂಡುಬಂದಿದೆ. ಯುವತಿ ದೇಹದ ಮೇಲೆ ಒಳ ಉಡುಪುಗಳು ಇರಲಿಲ್ಲವಾದ್ದರಿಂದ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಂತಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: 5 ಹುಲಿಕೊಂದ ಹಂತಕರು ಲಾಕ್ – ಕೊನೆಗೂ ಹೊರಬಂತು ರಹಸ್ಯ, 3 ಆರೋಪಿಗಳಿಗೆ ನ್ಯಾಯಾಂಗ ಬಂಧನ