ಬೆಂಗಳೂರು: ಗುಪ್ತಾಂಗ, ದೇಹದ ಮೇಲೆ 17 ಬಾರಿ ಚಾಕುವಿನಿಂದ ಇರಿದು ಭಾವಿ ಪತಿ ಅಪ್ರಾಪ್ತೆಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಡಿಜೆ ಹಳ್ಳಿಯಲ್ಲಿ (DJ Halli) ನಡೆದಿದೆ.
ಸೈಯದ್ ಶಬೀಲ್ ಕ್ರೌರ್ಯ ಮೆರೆದ ಆರೋಪಿಯಾಗಿದ್ದು, ಕೋಲಾರ ಮೂಲದ ಅಪ್ರಾಪ್ತೆಯನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ಯುದ್ಧ ಆರಂಭವಾದ ಬಳಿಕವೂ ತೈಲ ರಫ್ತು ಮಾಡುತ್ತಿದ್ದ ಸೌದಿಯ ರಿಫೈನರಿ ಮೇಲೆಯೇ ಇರಾನ್ ಡ್ರೋನ್ ದಾಳಿ
ಮೃತಳು ಕೋಲಾರದಿಂದ ಬೆಂಗಳೂರಿನಲ್ಲಿರುವ ಅಜ್ಜಿ ಮನೆಗೆ ಆಗಾಗ ಬರುತ್ತಿದ್ದಳು. ಈ ವೇಳೆ ಅಪ್ರಾಪ್ತೆಯ ಮೇಲೆ ಈರುಳ್ಳಿ ವ್ಯಾಪರಿಯೊಬ್ಬ ಪರಿಚಯವಾಗಿತ್ತು. ಅಲ್ಲಿಂದ ಪ್ರೀತಿ ಶುರುವಾಗಿ, ಹುಡುಗಿಯ ಮನೆಯವರ ಜೊತೆ ಮಾತನಾಡಿ 2025ರ ಜೂನ್‌ನಲ್ಲಿ ಎಂಗೇಜ್ಮೆಂಟ್ ಕೂಡ ಆಗಿದ್ದರು. ಇನ್ನೇನು ಮದುವೆಯಾಗಬೇಕಿತ್ತು. ಅಷ್ಟರಲ್ಲೇ ಅಪ್ರಾಪ್ತೆಯನ್ನು ಭಾವಿ ಪತಿಯೇ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಆಗಿದ್ದೇನು?
ಎಂಗೇಜ್ಮೆಂಟ್ ಬಳಿಕ ಅಪ್ರಾಪ್ತೆಯ ಮೇಲೆ ಆರೋಪಿ ಅನುಮಾನಪಡಲು ಶುರು ಮಾಡಿದ್ದ. ಡಿಜೆ ಹಳ್ಳಿಯಿಂದ ಸ್ವಲ್ಪ ದೂರದಲ್ಲಿದ್ದ ಸಕ್ಕರೆ ಮಂಡಿ ಪಾಳು ಬಿದ್ದ ಸಂಬಂಧಿಕರ ಜಾಗದಲ್ಲಿ ಇಬ್ಬರು ಆಗಾಗ ಭೇಟಿ ಆಗ್ತಿದ್ದರು. ಘಟನೆ ನಡೆದ ದಿನ ಶಬೀಲ್ ಅಪ್ರಾಪ್ತೆಯನ್ನು ಭೇಟಿಯಾಗೋಕೆ ಪ್ಲ್ಯಾನ್ ಮಾಡಿದ್ದ. ಅದರಂತೆ ಹುಡುಗಿಯನ್ನು ಬರಲು ಹೇಳಿದ್ದ. ಆಕೆ ಕೂಡ ಮೊಬೈಲ್‌ನ್ನು ಮನೆಯಲ್ಲಿ ಬಿಟ್ಟು ಭೇಟಿಯಾಗೋಕೆ ಹೋಗಿದ್ದಳು. ಬೆಳಿಗ್ಗೆ 6 ಗಂಟೆಗೆ ಮನೆಯಿಂದ ಹೋದ ಹುಡುಗಿ 10:30 ಕಳೆದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಮನೆಯವರು ಹುಡುಕಾಟ ಆರಂಭಿಸಿದ್ದರು. ಶಬೀಲ್‌ಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಆತನ ಮನೆಯವರ ಬಳಿ ವಿಚಾರಿಸಿದಾಗ ಅವರಿಬ್ಬರು ಭೇಟಿ ಆಗ್ತಿದ್ದ ಜಾಗದ ಬಗ್ಗೆ ತಿಳಿಸಿದ್ದರು.
ಭೇಟಿಯಾಗ್ತಿದ್ದ ಜಾಗಕ್ಕೆ ಹೋದಾಗ ರಕ್ತದ ಮಡುವಿನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಅಪ್ರಾಪ್ತಳ ಶವ ಪತ್ತೆಯಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಭೇಟಿಗೆಂದು ಕರೆದವನು ಆಕೆಯ ಎದೆ ಭಾಗವನ್ನು ಕತ್ತರಿಸಿ, ಬಳಿಕ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಆನಂತರ ದೇಹದ ಮೇಲೆ ಮನಬಂದಂತೆ 17 ಬಾರಿ ಇರಿದು ಕುತ್ತಿಗೆ ಕೊಯ್ದು ಹತ್ಯೆ ಮಾಡಿ ಕ್ರೌರ್ಯ ಮೆರೆದಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಬಂಧನ ಬಳಿಕ ಕೊಲೆಗೆ ನಿಖರ ಕಾರಣ ತಿಳಿದುಬರಲಿದೆ.ಇದನ್ನೂ ಓದಿ: ಇರಾನ್ ಯುದ್ಧ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ಲಾಸ್ಟಿಕ್ ಉದ್ಯಮಕ್ಕೆ ಬಂದ್ ಭೀತಿ

