ಬಾಗಲಕೋಟೆ: ಶಾಲಾ ಬಸ್ ಹಾಗೂ ಟ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ನಾಲ್ವರು ವಿದ್ಯಾರ್ಥಿಗಳು ದುರ್ಮರಣಕ್ಕೀಡಾಗಿರುವ ಘಟನೆ ಬಾಗಲಕೋಟೆಯ (Bagalkot) ಜಿಲ್ಲೆ ಜಮಖಂಡಿ ತಾಲ್ಲೂಕಿನ ಅಲಗೂರು ಗ್ರಾಮದಲ್ಲಿ ನಡೆದಿದೆ.
ತಡರಾತ್ರಿ ನಡೆದ ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳು (Students) ಸಾವನ್ನಪ್ಪಿದ್ದು, 8ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸಾಗರ ಕಡಕೋಳ (17), ಶ್ವೇತಾ (13), ಗೋವಿಂದ(13), ಬಸವರಾಜ (17) ಮೃತ ವಿದ್ಯಾರ್ಥಿಗಳು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಹಿಂದೂಗಳ ನಂಬಿಕೆ ಮೇಲೆ ಯಾಕಿಷ್ಟು ತಾತ್ಸಾರ? – ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ
Advertisement
Advertisement
ಮೃತರು ವರ್ಧಮಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು, ಇಬ್ಬರು ಪಿಯುಸಿ, ಮತ್ತಿಬ್ಬರು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.
Advertisement
ಭಾನುವಾರ ಸ್ನೇಹಿತರೊಟ್ಟಿಗೆ ಕಾರ್ಯಕ್ರಮ ಮುಗಿಸಿಕೊಂಡು ಕವಟಗಿ ಗ್ರಾಮದ ಕಡೆಗೆ ಸ್ಕೂಲ್‌ಬಸ್ ಹೊರಟಿತ್ತು. ರಾತ್ರಿ 12 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸದ್ಯ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
Advertisement
ಇನ್ನೋವಾ ಕಾರ್ ಟೈಯರ್ ಬ್ಲಾಸ್ಟ್: ಅತೀ ವೇಗವಾಗಿ ಬರುತ್ತಿದ್ದ ಇನ್ನೋವಾ ಕಾರಿನ ಟಯರ್ ಬ್ಲಾಸ್ಟ್ ಆಗಿದ್ದು, ನೋಡನೋಡ್ತಿದ್ದಂತೆ ಆಟೋಗೆ ಡಿಕ್ಕಿಯೊಡೆದಿದೆ. ಇನ್ನೋವಾ ಕಾರ್ ಗುದ್ದಿದ ರಭಸಕ್ಕೆ ಮನೆಯ ಕಾಂಪೌಂಡ್ ಉಡೀಸ್ ಆಗಿರೋ ಘಟನೆ ಬೆಂಗಳೂರಿನ ಲಾಲ್‌ಬಾಗ್ ರಸ್ತೆಯಲ್ಲಿ ನಡೆದಿದೆ. ಇದನ್ನೂ ಓದಿ: ರಾಷ್ಟ್ರಪತಿಗೆ ತುಚ್ಛವಾಗಿ ಸಂಬೋಧಿಸಿದ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ವಜಾ ಮಾಡಿ: ಹೆಚ್‍ಡಿಕೆ ಆಗ್ರಹ
ಅಪಘಾತದ ಭಯನಕ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಖಾಲಿ ರಸ್ತೆಯಲ್ಲಿ ಅತಿ ವೇಗವಾಗಿ ಲಾಲ್‌ಬಾಗ್ ರಸ್ತೆ ಮೂಲಕ ಜಯ ನಗರದ ಕಡೆ ಹೋಗುತ್ತಿದ್ದ ಕಾರ್‌ನ ಟಯರ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ಆದ ಕ್ಷಣದಲ್ಲೇ ಯಮ ಸ್ವರೂಪಿಯಂತೆ ಕಾರು ನುಗ್ಗಿದ್ದು, ಕೂದಲೆಳೆ ಅಂತರಲ್ಲಿ ವೃದ್ಧ ಪಾರಾಗಿದ್ದಾರೆ. ಘಟನೆಯಲ್ಲಿ ಕಾಂಪೌಂಡ್ ನೆಲಕ್ಕುರುಳಿದ್ದು, ಆಟೋ ಹಾಗೂ ಕಾರು ಜಖಂಗೊಂಡಿದೆ. ಘಟನೆ ಸಂಬಂಧ ವಿವಿಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಹೆಚ್‍ಡಿಕೆ ಸಹವಾಸ ಮಾಡಿದವರು ಉದ್ಧಾರ ಆದ ಇತಿಹಾಸವಿಲ್ಲ: ವೀರಪ್ಪ ಮೊಯ್ಲಿ