ರಾಯಚೂರು: ಸ್ವಾತಂತ್ರ‍್ಯ ದಿನಾಚರಣೆ (Independence Day) ಹಿನ್ನೆಲೆ ರಾಯಚೂರಿನಲ್ಲಿ (Raichur) ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದ ವೇಳೆ ಯುವ ಸಾಹಸಿ ಮಾನ್ವಿಯ (Manvi) ಸತೀಶ್ ಕೊನಾಪುರಪೇಟೆ ಹಲ್ಲಿನಿಂದ 1 ಟನ್ ತೂಕದ ಕಾರನ್ನು ಎಳೆಯುವ ಮೂಲಕ ಸಾಹಸ ಮೆರೆದಿದ್ದಾನೆ.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಸುಮಾರು 1 ಟನ್ ತೂಕದ ಸ್ವಿಫ್ಟ್ ಡಿಸೈರ್ (Swift Dzire) ಕಾರಿಗೆ ಹಗ್ಗ ಕಟ್ಟಿ ಬಾಯಿಂದ 100 ಮೀಟರ್ ದೂರದವರೆಗೆ ಎಳೆಯುವ ಮೂಲಕ ಸಾಹಸ ಪ್ರದರ್ಶಿಸಿದ್ದಾನೆ. ಬ್ರೂಸ್ಲಿ ಅಭಿಮಾನಿಯಾಗಿರುವ ಈತ ಈಗಾಗಲೇ ಹಲವೆಡೆ ತನ್ನ ಸಾಹಸ ಪ್ರದರ್ಶಿಸಿ ಪ್ರಶಂಸೆ ಪಡೆದಿದ್ದಾನೆ. ಇದನ್ನೂ ಓದಿ: 12 ವರ್ಷಗಳಲ್ಲೇ ಬೆಂಗ್ಳೂರು ಮೆಟ್ರೋದಲ್ಲಿ ದಾಖಲೆ ಪ್ರಯಾಣ
ಇನ್ನೂ ಇದೇ ವೇಳೆ ಅಗ್ನಿ ಶಾಮಕದಳ ಸಿಬ್ಬಂದಿ, ಬೆಂಕಿ ಅವಘಡಗಳಾದಾಗ ರಕ್ಷಣೆ ಮಾಡುವುದು ಹೇಗೆ ಎಂಬುದರ ಬಗ್ಗೆ ಅಣಕು ಪ್ರದರ್ಶನ ಮಾಡಿದರು. ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಾಗ ಏನು ಮಾಡಬೇಕು? ಅಡುಗೆ ಅನಿಲದ ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡಾಗ ಏನು ಮಾಡಬೇಕು ಎಂಬ ಕುರಿತು ಅಣಕು ಪ್ರದರ್ಶನ ಮಾಡಿದರು. ಇದನ್ನೂ ಓದಿ: ನೀರಜ್ ಚೋಪ್ರಾ – ಮನು ಭಾಕರ್ ಮದುವೆ ವದಂತಿ: ಎಲ್ಲವೂ ಆಧಾರ ರಹಿತ ಎಂದ ಮನು ಭಾಕರ್