ಚಾಮರಾಜನಗರ: ತನ್ನ ಶಕ್ತಿ, ಚತುರತೆ, ಸೂಕ್ಷ್ಮತೆಯಿಂದ ಬೇಟೆಗಾರನ ಪತ್ತೆ ಹಚ್ಚುವಲ್ಲಿ ಬಂಡೀಪುರದ ರಾಣಾದಂತೆ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆಗಾರರ ಸೊಕ್ಕಡಗಿಸಲು ಝಾನ್ಸಿ ಎಂಬ ಸ್ನೈಫರ್ ಡಾಗ್ ಚಂಡೀಗಢದಲ್ಲಿ ತರಬೇತಿ ಮುಗಿಸಿಕೊಂಡು ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯಕ್ಕೆ ಎಂಟ್ರಿ ಕೊಟ್ಟಿದೆ.
Advertisement
ಬಂಡೀಪುರದಲ್ಲಿ ತನ್ನ ಪರಾಕ್ರಮ ಮೆರೆಯುತ್ತಿರುವ ರಾಣಾದಂತೆ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಝಾನ್ಸಿ ಎಂಬ ಜರ್ಮನ್ ಶೆಫರ್ಡ್ ತಳಿಯ ಶ್ವಾನವು ಚಂಡೀಗಢದಲ್ಲಿ ಸ್ವಯಂ ಸೇವಾ ಸಂಸ್ಥೆಯಾದ ಬಿಟಿಸಿ-ಐಟಿಬಿಪಿ ಶಿಬಿರದಲ್ಲಿ 7 ತಿಂಗಳ ಕಠಿಣ ತರಬೇತಿ ಬಳಿಕ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯದಲ್ಲಿ ಕಾರ್ಯಾರಂಭ ಮಾಡಿದೆ. ಇದನ್ನೂ ಓದಿ: ಹುಲಿಗಿಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆ – ರೈತರಿಗಿನ್ನು ದೂರವಾಗಿಲ್ಲ ವ್ಯಾಘ್ರನ ಆತಂಕ
Advertisement
Advertisement
ಸದ್ಯಕ್ಕೆ ಪುಣಜನೂರು ವಲಯದಲ್ಲಿ ಶ್ವಾನವನ್ನು ಬಳಸಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದ್ದು, ಝಾನ್ಸಿಯನ್ನು ನೋಡಿಕೊಳ್ಳಲು ಫಾರೆಸ್ಟ್ ಗಾರ್ಡ್ ಬಸವರಾಜು ಹಾಗೂ ವಾಚರ್ ಸಿದ್ದರಾಮಣ್ಣ ಎಂಬವರಿಗೂ ತರಬೇತಿ ಕೊಡಲಾಗಿದೆ. ಇದನ್ನೂ ಓದಿ: ಹೋಂ ವರ್ಕ್ ಮಾಡದ ಮಗನ ಕೈ,ಕಾಲು ಕಟ್ಟಿ ಫ್ಯಾನಿಗೆ ನೇತು ಹಾಕಿದ ತಂದೆ
Advertisement
ಬಿಆರ್ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಈವರೆಗೂ ಸ್ನೈಫರ್ ಡಾಗ್ ಒಂದೂ ಕೂಡ ಇರಲಿಲ್ಲ. ಇದೇ ಮೊದಲ ಬಾರಿಗೆ ಝಾನ್ಸಿ ಬಿಆರ್ಟಿಗೆ ಕಾಲಿಟ್ಟಿದ್ದು ಈ ಶ್ವಾನ ಬಳಸಿಕೊಂಡು ಮರಗಳ್ಳತನ, ಕಳ್ಳಬೇಟೆಗಳಂತಹ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ವಿಶ್ವಾಸ ಅರಣ್ಯಾಧಿಕಾರಿಗಳದಾಗಿದೆ. ಈಗಾಗಲೇ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾಣಾ ಮತ್ತು ಮುಧೋಳ ತಳಿಯ ಮಾರ್ಗರೇಟ್ ಶ್ವಾನಗಳಿವೆ. ಕಳ್ಳಬೇಟೆಗಾರರು, ಹುಲಿ ಪತ್ತೆ ಕಾರ್ಯಾಚರಣೆ, ಇನ್ನಿತರ ಅರಣ್ಯ ಅಪರಾಧ ಪ್ರಕರಣ ಪತ್ತೆಗೆ ಝಾನ್ಸಿ ಅರಣ್ಯ ಇಲಾಖೆಗೆ ವರವಾಗಿ ಪರಿಣಮಿಸಲಿದೆ.