ಇಸ್ಲಾಮಾಬಾದ್: ಭಾರತ ಹಾಗೂ ಪಾಕಿಸ್ತಾನ ವಿಭಜನೆ ವೇಳೆ ದೂರ ಆಗಿದ್ದ ಸಹೋದರರು ಮತ್ತೆ 74 ವರ್ಷಗಳ ಬಳಿಕ ಒಂದಾದ ಭಾವನಾತ್ಮಕವಾದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಮೊಹಮ್ಮದ್ ಸಿದ್ದಿಕ್ ಮತ್ತು ಅವರ ಹಿರಿಯ ಸಹೋದರ ಹಬೀಬ್ ಬೇರೆ ಆಗಿದ್ದರು. ಈ ವೇಳೆ ಇನ್ನೂ ಮಗುವಾಗಿದ್ದ ಮೊಹಮ್ಮದ್ ಸಿದ್ದಿಕ್ ಪಾಕಿಸ್ತಾನದಲ್ಲಿಯೇ ಉಳಿದುಕೊಂಡರು. ಆದರೆ ಹಬೀಬ್ ಅವರು ಭಾರತದಲ್ಲಿಯೇ ವಾಸಿಸುತ್ತಾ ಬೆಳೆದರು. ಇದನ್ನೂ ಓದಿ: ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು: ಯೋಗಿ ಆದಿತ್ಯನಾಥ್
ಎರಡು ದೇಶಗಳ ಮಧ್ಯೆ ಹಂಚಿ ಹೋಗಿದ್ದ ಈ ಇಬ್ಬರು ಸಹೋದರರು ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್‍ನಿಂದ ಭಾರತಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್ ನಲ್ಲಿ ಮತ್ತೆ ಒಂದಾಗಿದ್ದಾರೆ. 74 ವರ್ಷಗಳ ಬಳಿ ಒಬ್ಬರನ್ನೊಬ್ಬರು ನೋಡಿದ ಸಹೋದರರು ಬಿಗಿದಪ್ಪಿಕೊಂಡು ಆನಂದದಿಂದ ಕಣ್ಣೀರು ಸುರಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ನಾನು ಖುಷಿಯಾಗಿದ್ದೇನೆ, ಅವರಿಗೆ ದೇವರು ಒಳ್ಳೆಯದು ಮಾಡಲಿ: ಸೈನಾ ನೆಹ್ವಾಲ್
Brothers meet after 74 years because of 1947! #pakistan #punjab
(I admit, I cried) pic.twitter.com/NddUYBHK09
— Manpreet Singh (@mjassal) January 12, 2022
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಹೃದಯಸ್ಪರ್ಶಿ ವೀಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.