ಕಲಬುರಗಿ: ದಸರಾ (Dasara) ಹಬ್ಬದ ಪ್ರಯುಕ್ತ ಬನ್ನಿ ಬಂಗಾರ ಕೊಡಲು ಸಹೋದರಿಯ ಮನೆಗೆ ತೆರಳಿದ ಸಹೋದರರಿಬ್ಬರು ಬಾವನ (Sister Husband) ಕಾಲಿಗೆ ಬಿದ್ದು ಆ ಬಳಿಕ ಆತನನ್ನು ಕೊಚ್ಚಿ ಕೊಲೆ (Murder) ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
Advertisement
ಕಲಬುರಗಿಯ (Kalaburagi) ಸಂತೋಷ್ ಕಾಲೋನಿಯ ನಿವಾಸಿ ಲಕ್ಷ್ಮೀಪುತ್ರ ಕೊಲೆಯಾದ ದುರ್ದೈವಿ. ಲಕ್ಷ್ಮೀಪುತ್ರ ಮತ್ತು ಪ್ರೀತಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರಿಗೂ ಕೂಡ ಇದು ಎರಡನೇ ಮದುವೆಯಾಗಿತ್ತು. ಆ ಬಳಿಕ ನೆಮ್ಮದಿಯಾಗಿಯೇ ಇದ್ದರು. ಲಕ್ಷ್ಮೀಪುತ್ರ ಇಬ್ಬರು ಪತ್ನಿಯರನ್ನು ಹೊಂದಿದ್ದ. ಮೊದಲನೆಯೇ ಪತ್ನಿ ಶಶಿಕಲಾಳನ್ನು ಬಿಟ್ಟು ಎರಡನೇ ಪತ್ನಿ ಪ್ರೀತಿ ಜೊತೆ ವಾಸವಿದ್ದ. ಲಕ್ಷ್ಮೀಪುತ್ರ ಜೀವನೋಪಾಯಕ್ಕಾಗಿ ಸಂತೋಷ್ ಕಾಲೋನಿಯಲ್ಲಿ ಟೆಂಟ್‍ಹೌಸ್ ನಡೆಸಿಕೊಂಡು ಹೋಗುತ್ತಿದ್ದ. ಇದೇ ವೇಳೆ ಎರಡನೇ ಪತ್ನಿ ಸಹೋದರರಾದ ಶಿವಕಾಂತ್ ಮತ್ತು ಪ್ರಶಾಂತ್‍ನಿಗೆ ಎಂಟು ಲಕ್ಷ ರೂಪಾಯಿ ಹಣವನ್ನು ಸಾಲ ನೀಡಿದ್ದ. ಇದನ್ನೂ ಓದಿ: PFI Ban – ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಧಿಕರಣ ರಚಿಸಿದ ಕೇಂದ್ರ
Advertisement
ಕೆಲದಿನಗಳ ನಂತರ ಸಾಲ ವಾಪಸ್ ಕೇಳಿದ್ದ ಈ ವೇಳೆ ಬಾಮೈದರು ಕೊಡುತ್ತೇವೆ ಎಂದಿದ್ದರು. ಅಂತೆಯೇ ಅಕ್ಟೋಬರ್ 2 ರಂದು ಹಣ ಕೊಡುತ್ತೇವೆ ಎಂದು ಶಿವಕಾಂತ್ ಮತ್ತು ಪ್ರಶಾಂತ್ ಒಪ್ಪಿಕೊಂಡಿದ್ದಾರೆ. ಆದರೆ ಹಣ ಹೊಂದಿಸಲು ಸಾಧ್ಯವಾಗದಿದ್ದಾಗ, ನಿನ್ನೆ ದಸರಾ ಹಬ್ಬದ ನಿಮಿತ್ತ ಬಾವನಿಗೆ ಬನ್ನಿ ಕೊಡಲು ಅಂತಾ ಇಬ್ಬರು ಮನೆಗೆ ಬಂದಿದ್ದಾರೆ. ಬನ್ನಿ ಕೊಟ್ಟು ಕಾಲಿಗೆ ಬೀಳುವ ನೆಪದಲ್ಲಿ ತಮ್ಮೊಂದಿಗಿದ್ದ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
Advertisement
Advertisement
ಸ್ವಂತ ಟೆಂಟ್‍ಹೌಸ್ ನಡೆಸಿಕೊಂಡು ಲಕ್ಷ್ಮೀಪುತ್ರ ಜೀವನ ಸಾಗಿಸುತ್ತಿದ್ದ. ಮೊದಲ ಪತ್ನಿ ಶಶಿಕಲಾಳಿಗೆ ಮೂವರು ಮಕ್ಕಳಿದ್ದು, ಕೆಲವರ್ಷಗಳ ಹಿಂದೆ ಶಶಿಕಲಾಳನ್ನು ಬಿಟ್ಟು ಪ್ರೀತಿ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದ. ಇದರ ಮಧ್ಯೆ ಕಳೆದ ಎರಡು ದಿನಗಳ ಹಿಂದೆ ದಸರಾ ಹಬ್ಬದ ನಿಮಿತ್ತ ಮೊದಲ ಪತ್ನಿ ಶಶಿಕಲಾಳ ಮಕ್ಕಳಿಗೆ ಬಟ್ಟೆ ಕೊಡಿಸಲು ಮನೆಗೆ ಬಂದಿದ್ದ. ಟೆಂಟ್‍ಹೌಸ್ ನಡೆಸಿಕೊಂಡು ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಿದ್ದ ಲಕ್ಷ್ಮೀಪುತ್ರ ಪ್ರೀತಿಯ ಸಹೋದರರಿಗೆ ಹಣಕಾಸಿನ ಅವಶ್ಯಕತೆ ಇದ್ದ ಕಾರಣ ಎಂಟು ಲಕ್ಷ ರೂಪಾಯಿ ಹಣ ನೀಡಿದ್ದನು. ಆದರೆ ಹಣ ವಾಪಾಸ್ ಕೇಳಿದಾಗ ಬಾಮೈದರು ಕಾಲಹರಣ ಮಾಡಿ ದಿನ ನೂಕುತ್ತಿದ್ದರು. ಇದನ್ನೂ ಓದಿ: ಅಮೆರಿಕದಲ್ಲಿ ರೂಮ್‍ಮೇಟ್‍ನಿಂದ ಭಾರತೀಯ ವಿದ್ಯಾರ್ಥಿ ಮರ್ಡರ್
ಹಣ ಹೊಂದಿಸಲಾಗದೇ ಒದ್ದಾಡುತ್ತಿದ್ದ ಶಿವಕಾಂತ್ ಮತ್ತು ಪ್ರಶಾಂತ್ ಸೇರಿಕೊಂಡು ಬಾವನಿಗೆ ಚಟ್ಟ ಕಟ್ಟಲು ಮುಹೂರ್ತ ಫಿಕ್ಸ್ ಮಾಡಿದ್ದರು. ಅದರಂತೆ ದಸರಾ ಹಬ್ಬದ ನೆಪದಲ್ಲಿ ಬನ್ನಿ ಕೊಡಲು ಮನೆಗೆ ಹೋಗಿ ಅಂದುಕೊಂಡಂತೆ ಬಾವನನ್ನು ಸಹೋದರಿಯ ಎದುರೇ ಕೊಚ್ಚಿ ಕೊಂದಿದ್ದಾರೆ. ಇದೀಗ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.