ಭೋಪಾಲ್: ಅಂತರ್ಜಾತಿ ಯುವಕನ ಜೊತೆ ಓಡಿ ಹೋಗಿ ಮದುವೆಯಾಗಿದ್ದಕ್ಕೆ ಆಕೆಯ ಸಹೋದರರೇ ಗರ್ಭಿಣಿ ಸಹೋದರಿಯನ್ನು ಶೂಟ್ ಮಾಡಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಇಂದೋರ್ನ ರಾವಡ್ ಗ್ರಾಮದ ಬುಲ್ಬುಲ್(21) ಕೊಲೆಯಾದ ಗರ್ಭಿಣಿ. ಬುಲ್ವುಲ್ ಅದೇ ಗ್ರಾಮದ ಕುಲದೀಪ್ನನ್ನು ಪ್ರೀತಿಸುತ್ತಿದ್ದಳು. ಆದರೆ ಇವರ ಮದುವೆಗೆ ಎರಡು ಮನೆಯವರು ಬೇರೆ ಜಾತಿ ಎಂದು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಪ್ರೇಮಿಗಳಿಬ್ಬರು 8 ತಿಂಗಳ ಹಿಂದೆ ಓಡಿ ಹೋಗಿ ಮದ್ವೆಯಾಗಿದ್ದರು ಪೊಲೀಸ್ ಅಧಿಕಾರಿ ರಾಮ್ಕುಮಾರ್ ರೈ ತಿಳಿಸಿದ್ದಾರೆ.
Advertisement
ಮದುವೆಯಾದ ಬಂತರ ಬುಲ್ಬುಲ್ ಮತ್ತು ಕುಲ್ದೀಪ್ ಇಬ್ಬರು ಗ್ರಾಮದಿಂದ ದೂರು ಹೋಗಿ ವಾಸಿಸುತ್ತಿದ್ದರು. ಆದರೆ ಮದುವೆಯ 8 ತಿಂಗಳ ನಂತರ ತಮ್ಮ ಗ್ರಾಮಕ್ಕೆ ಇಬ್ಬರು ಮರಳಿದ್ದರು.
Advertisement
ಬುಲ್ಬುಲ್ ಪೋಷಕರನ್ನು ನೋಡಬೇಕೆಂದು ಮನೆಗೆ ಹೋಗಿದ್ದಳು. ಇಬ್ಬರು ಭೇಟಿಯಾಗಿ ಮನೆಗೆ ವಾಪಸ್ ಹಿಂದಿರುಗಿದ್ದಳು. ಆದರೆ ಈ ವೇಳೆ ಆಕೆಯ ತಲೆಗೆ ಸಹೋದರರಾದ ಕಾರ್ತಿಕ್ ಮತ್ತು ಶುಭಮ್ ಇಬ್ಬರು ಶೂಟ್ ಮಾಡಿದ್ದಾರೆ ಎಂದು ಪತಿ ಕುಲ್ದೀಪ್ ಹೇಳಿದ್ದಾರೆ.
Advertisement
RK Rai,SDPO,Depalpur: As we reached the spot we got to know that the victim belonged to Jat community & married Kuldeep from Rajput community. Prima facia it seems that Jat family was unhappy with the marriage &victim's brother Karthik had shot her.We have taken him into custody. pic.twitter.com/CSuoktT9JE
— ANI (@ANI) June 22, 2019
Advertisement
ಶೂಟ್ ಮಾಡಿದ ತಕ್ಷಣ ಬುಲ್ಬುಲ್ಳನ್ನು ಇಂದೋರ್ ಮಹಾರಾಜ ಯಶ್ವಂತರಾವ್ ಆಸ್ಪತ್ರೆಗೆ (ಎಂವೈಹೆಚ್) ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿಯೇ ಬುಲ್ಬುಲ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸೋದರಿಯನ್ನು ಕೊಲೆ ಮಾಡಿದ್ದ ಆರೋಪಿಗಳು ಬೆಟ್ಮಾ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]