ಬೆಂಗಳೂರು: ಪತ್ನಿಯನ್ನು ನಿಂದಿಸಿದ್ದಕ್ಕೆ ಹಲ್ಲೆ ಮಾಡಿ ತಮ್ಮನನ್ನು ಕೊಲೆಗೈದ ಘಟನೆ ಮಾಗಡಿ ರಸ್ತೆಯ (Magadi Road) ಗೋಪಾಲಪುರದಲ್ಲಿ ನಡೆದಿದೆ.
ಸೋನು ಪಾಷಾ (24) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ. ಮೃತ ಸೋನು ಪಾಷಾ ಹಾಗೂ ಆತನ ಸಹೋದರ ಅಕ್ರಮ್ ಗ್ಯಾರೆಜ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಇದೇ ಏರಿಯಾದಲ್ಲಿ ಅಕ್ರಮ್ ಪತ್ನಿ ಜೊತೆ ವಾಸವಿದ್ದ. ಅಕ್ರಮ್ ಚಿಕ್ಕಪ್ಪನ ಮಗ ಫಾರೂಕ್ ಜೊತೆ ಇದೇ ತಿಂಗಳ 3ರಂದು ಜಗಳ ಮಾಡಿಕೊಂಡಿದ್ದ. ಈ ವೇಳೆ ಫಾರೂಕ್ ಕಾಲ್ ಮಾಡಿ ಅಕ್ರಮ್ ಹಾಗೂ ಆತನ ಪತ್ನಿಯ ಬಗ್ಗೆ ಅವಾಚ್ಯವಾಗಿ ನಿಂದಿಸಿ ಏರಿಯಾದಲ್ಲಿ ಗಲಾಟೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಯುಪಿಯಲ್ಲಿ ಮುಂದುವರೆದ ಬುಲ್ಡೋಜರ್ ಅಸ್ತ್ರ – ಲವ್ ಜಿಹಾದ್ ಆರೋಪಿ ಮನೆ ಉಡೀಸ್
ಇಬ್ಬರನ್ನು ರಾಜಿ ಮಾಡಲು ರಿಯಾಜ್ ಎಂಬಾತ ಇಬ್ಬರನ್ನೂ ಗೊಪಾಲಪುರದ ಗ್ಯಾರೇಜ್‍ಗೆ ಕರೆದೊಯ್ದಿದ್ದ. ಈ ವೇಳೆ ಅಕ್ರಮ್ ಜೊತೆ ಸಹೋದರ ಸೋನು ಸಹ ಬಂದಿದ್ದ. ಬಳಿಕ ಅಕ್ರಮ್ ಹಾಗೂ ಫಾರೂಕ್‍ನನ್ನು ಕರೆಸಿದ್ದ ರಿಯಾಜ್ ಗುಜುರಿ ಅಂಗಡಿಯ ಬಳಿ ಸಂಧಾನ ಮಾಡಿದ್ದ.
ಈ ವೇಳೆ ಅಲ್ಲೇ ಇದ್ದ ಸೋನು, ಫಾರೂಕ್‍ಗೆ ಮತ್ತೆ ನಿಂದನೆ ಮಾಡಿದ್ದ. ಇದರಿಂದ ಕೊಪಗೊಂಡ ಫಾರೂಕ್ ಅಲ್ಲೇ ಇದ್ದ ರಾಡ್‍ನಿಂದ ಸೋನು ತಲೆಗೆ ಹೊಡೆದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಸಂಬಂಧ ಮಾಗಡಿ ರಸ್ತೆ ಪೊಲೀಸರು (Police) ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: Mysuru Bengaluru Expressway ಪ್ರಯಾಣಕ್ಕೆ ಸ್ಪೀಡ್ ಲಿಮಿಟ್ – 100 ಕಿಮೀ ವೇಗ ದಾಟಿದ್ರೆ ಫೈನ್!
Web Stories